ED ನಿರ್ದೇಶಕರ ಅಧಿಕಾರವಧಿ ವಿಸ್ತರಣೆ ಕಾನೂನುಬಾಹಿರ: ಸುಪ್ರೀಂಕೋರ್ಟ್​

ಅಕ್ರಮ ಹಣ ವರ್ಗಾವಣೆ ಸಂಬಂಧ ತನಿಖೆ ನಡೆಸುವ ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್​ ಕುಮಾರ್​ ಮಿಶ್ರಾ ಅವರ ಅಧಿಕಾರವಧಿ ವಿಸ್ತರಣೆಯನ್ನು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದೆ.

ಆದರೆ ಹೊಸ ನಿರ್ದೇಶಕರ ನೇಮಕವಾಗಬೇಕಾದ ಹಿನ್ನೆಲೆಯಲ್ಲಿ ಅಧಿಕಾರ ಹಸ್ತಾಂತರಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ಜುಲೈ 31ರವರೆಗೆ ಮಿಶ್ರಾಗೆ ED ನಿರ್ದೇಶಕರ ಹುದ್ದೆಯಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದೆ.

ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಬಿ ಆರ್​ ಗವಾಯಿ, ನ್ಯಾಯಮೂರ್ತಿ ವಿಕ್ರಂ ನಾಥ್​ ಮತ್ತು ನ್ಯಾಯಮೂರ್ತಿ ಸಂಜಯ್​ ಕರೋಲ್​ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಹೇಳಿದೆ.

ಆದರೆ ಕೇಂದ್ರೀಯ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶಾನಲಯದ ನಿರ್ದೇಶಕರ ಅವಧಿಯನ್ನು ಐದು ವರ್ಷದವರೆಗೆ ವಿಸ್ತರಿಸುವ ಸಂಬಂಧ  ಕೇಂದ್ರೀಯ ವಿಚಕ್ಷಣಾ ದಳ ಕಾಯ್ದೆ ಮತ್ತು ದೆಹಲಿ ಪೊಲೀಸ್​ ಸ್ಥಾಪನಾ ಕಾಯ್ದೆಗೆ ಮಾಡಲಾದ ತಿದ್ದುಪಡಿಯನ್ನು ಸುಪ್ರೀಂಕೋರ್ಟ್​ ಎತ್ತಿ ಹಿಡಿದಿದ್ದು, ಈ ಕುರಿತ ಮೇಲ್ಮನವಿಯನ್ನು ವಜಾಗೊಳಿಸಿದೆ.

2018ರ ನವೆಂಬರ್​ನಲ್ಲಿ ಮೊದಲ ಬಾರಿಗೆ ಈಡಿ ನಿರ್ದೇಶಕರಾಗಿ ಮಿಶ್ರಾ ನೇಮಕವಾಗಿದ್ದರು. 2020ರಲ್ಲಿ ನಿವೃತ್ತರಾಗಬೇಕಿದ್ದ ಮಿಶ್ರಾ ಅವರಿಗೆ ಪ್ರಧಾನಿ ಮೋದಿ ಸರ್ಕಾರ ಸುಗ್ರೀವಾಜ್ಞೆ ಮೂಲಕ 2 ವರ್ಷದಿಂದ ಮೂರು ವರ್ಷಕ್ಕೆ ಅಧಿಕಾರವಧಿ ವಿಸ್ತರಿಸಿತ್ತು.

ಅಧಿಕಾರವಧಿ ವಿಸ್ತರಣೆಯನ್ನು ಪ್ರಶ್ನಿಸಿ ಕಾಂಗ್ರೆಸ್​ ಮತ್ತು ಟಿಎಂಸಿ ನಾಯಕರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.

 

LEAVE A REPLY

Please enter your comment!
Please enter your name here