ಎಲ್ಲಾ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ತಿಳಿಸಿದೆ. ಈ ಯೋಜನೆಯ ಅನುಷ್ಠಾನಕ್ಕೆ ತಾತ್ವಿಕ ಒಪ್ಪಿಗೆ ನೀಡಿ ಆದೇಶವನ್ನು ಹೊರಡಿಸಿದೆ.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಭಾವಿಚಿತ್ರವಿರುವ ನಕಲಿ ವಿದ್ಯುತ್ ಬಿಲ್ ಸೃಷ್ಟಿ ಮಾಡಿರುವ ಕಿಡಿಗೇಡಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.
ನಕಲಿ ಬಿಲ್ ಮೇಲ್ಭಾಗದಲ್ಲಿ ಸಿದ್ದರಾಮಯ್ಯ ಭಾವಚಿತ್ರವಿದೆ. ಗೃಹಜ್ಯೋತಿ ವಿದ್ಯುತ್ ಸರಬರಾಜು ನಿಯಮಿತ ಎಂದು ಉಲ್ಲೇಖಿಸಲಾಗಿದೆ.
ಬಿಲ್ನಲ್ಲಿ 200 ಯೂನಿಟ್ ಬಳಕೆ ಮಾಡಲಾಗಿದೆ ಎಂದು ತೋರಿಸಲಾಗಿದೆ. ಬಿಲ್ ಕೊನೆಯಲ್ಲಿ.. ಬಿಲ್ ಮೊತ್ತ -00 ಎಂದು ಮುದ್ರಿಸಲಾಗಿದೆ.
ಕೊನೆಯಲ್ಲಿ, ನಮ್ಮ ವಿದ್ಯುತ್ ಬಿಲ್.. ಇನ್ನು ನಮ್ಮ ಜವಾಬ್ದಾರಿ ಎಂದು ಮುದ್ರಿಸಲಾಗಿದೆ. ನಕಲಿ ಬಿಲ್ ಕೊನೆಯಲ್ಲಿ ಕಾಂಗ್ರೆಸ್ ಚಿನ್ಹೆ ಹಸ್ತವೂ ಇದೆ.