ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಹೆಚ್ಚಳದ ಆದೇಶ ಸೋಮವಾರ ಜುಲೈ 18 ರಿಂದ ಜಾರಿಗೆ ಬರಲಿದೆ. ಆ ಮೂಲಕ ದೈನಂದಿನ ಅತ್ಯಗತ್ಯ ವಸ್ತುಗಳ ಬೆಲೆ ಮತ್ತಷ್ಟು ಬೆಲೆ ಹೆಚ್ಚಳಗೊಳ್ಳಲಿವೆ.
ದಿನಬಳಕೆಯ ವಿವಿಧ ವಸ್ತುಗಳ ಮತ್ತು ಹಲವು ಸೇವೆಗಳ ಮೇಲೆ ಜೆಎಸ್ಟಿ ಜಾರಿ ಮಾಡುವ ಹಾಗೂ ಮತ್ತಷ್ಟು ಹೆಚ್ಚಿಸುವ ಜಿಎಸ್ಟಿ ಮಂಡಳಿಯ ನಿರ್ಧಾರ ಸೋಮವಾರದಿಂದ ಜಾರಿಯಾಗಲಿದೆ.
ಈಗಾಗಲೇ ದಯನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯ ತತ್ತರಿಸುತ್ತಿದ್ದಾನೆ. ಇದರ ನಡುವೆ, ಕೇಂದ್ರ ಸರ್ಕಾರದ ಈ ನಿರ್ಧಾರ ಬಡ ಹಾಗೂ ಮಧ್ಯಮ ವರ್ಗದವರ ಮೇಲೆ ಬರೆ ಎಳೆದಂತಾಗಿದೆ.
ಯಾವ ವಸ್ತುಗಳು ದುಬಾರಿ :
- ಪ್ಯಾಕ್ ಮಾಡಿದ ಮೊಸರು, ಪನ್ನೀರ್, ಜೇನುತುಪ್ಪ, ಮೀನು, ಮಾಂಸ, ಬೆಲ್ಲ, ಒಣಗಿಸಿದ ತರಕಾರಿ, ಗೋಧಿ, ಮಂಡಕ್ಕಿ ಹಾಗೂ ಸಾವಯವ ಗೊಬ್ಬರಗಳು.
- ಭೂಪಟ, ಚಾರ್ಟ್ಸ್, ಅಟ್ಲಾಸ್, ಸೋಲಾರ್ ವಾಟರ್ ಹೀಟರ್, ಮದ್ರಣ, ಬರಹ/ಚಿತ್ರಕಲೆಯ ಇಂಕ್, ಎಲ್ಇಡಿ ಬಲ್ಪ್, ಎಲ್ಇಡಿ ಲ್ಯಾಂಪ್ಗಳು.
- ಚರ್ಮದ ಸಿದ್ಧ ಉತ್ಪನ್ನಗಳು, ಟೈಲರಿಂಗ್, ಜವಳಿ ಸೇವೆಗಳು, ಚೆಕ್ಬುಕ್, ಅಂಚೆ ಇಲಾಖೆ ಸೇವೆಗಳು, 10 ಗ್ರಾಂ.ಗಿಂತ ಕಡಿಮೆ ಇರುವ ಲಕೋಟೆ.
- ನಿತ್ಯದ ಬಾಡಿಗೆ 1000 ರೂ.ಗಳಿಗಿಂತ ಕಡಿಮೆ ಇರುವ ಹೋಟೆಲ್ ಬಾಡಿಗೆಗೂ ಶೇ.12 ರಷ್ಟು ತೆರಿಗೆ ಜಾರಿ.
- ನಿತ್ಯ 5 ಸಾವಿರ ರೂ.ಗಿಂತ ಹೆಚ್ಚಿನ ಶುಲ್ಕ ಇರುವ ಐಸಿಯು ಹೊರತುಪಡಿಸಿದ ಆಸ್ಪತ್ರೆ ಕೊಠಡಿಗಳ ಬಿಲ್ಗೆ ಶೇ 5 ರಷ್ಟು ಜಿಎಸ್ಟಿ.
- ಉದ್ಯಮ ಸಂಸ್ಥೆಗಳು ತಮ್ಮ ಕಟ್ಟಡಗಳನ್ನು ಬಾಡಿಗೆ ನೀಡಿದ್ದರೆ. ಅದಕ್ಕೆ, ಇಲ್ಲಿಯವರೆ ಇದ್ದ ವಿನಾಯಿತಿ ರದ್ದು.
- ಬ್ಲಡ್ ಬ್ಯಾಂಕ್ಗಳಿಗೆ ಇಲ್ಲಿಯವರೆಗೆ ನೀಡಲಾಗಿದ್ದ ತೆರಿಗೆ ವಿನಾಯಿತಿ ರದ್ದು.
ಈಗಾಗಲೇ ಕರ್ನಾಟಕ ಹಾಲು ಉತ್ಪಾದಕ ಮಹಾ ಮಂಡಳಿ ತನ್ನ ಉತ್ಪನ್ನಗಳಿಗೆ ದರೆ ಹೆಚ್ಚಿಸಿ ಆದೇಶ ಹೊರಡಿಸಿದೆ. ನೂತನ ಪರಿಷ್ಕೃತ ದರ ಸೋಮವಾರದಿಂದ ಜಾರಿಗೆ ಬರಲಿದೆ.