ತೈವಾನ್ನ ಆಗ್ನೇಯ ಭಾಗದಲ್ಲಿ ಇಂದು ಭಾನುವಾರ 7.2 ತೀವ್ರತೆಯ ಭೂಕಂಪ (Earthquake in Taiwan) ಸಂಭವಿಸಿದೆ.
ಅಮೆರಿಕದ ಭೂವೈಜ್ಞಾನಿಕ ಸಂಸ್ಥೆ ತೈವಾನ್ನಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ ಹಾಗೂ 10 ಕಿ.ಮೀ(6.21 ಮೈಲಿ) ಆಳದಲ್ಲಿ ಅದರ ಕೇಂದ್ರ ಬಿಂದುವನ್ನು ಗುರುತಿಸಿದೆ. ಭೂಕಂಪದ ಕೇಂದ್ರ ಬಿಂದುವಿನಿಂದ ಸುಮಾರು 300 ಕಿ.ಮೀ ಆಳದಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಅಮೆರಿಕದ ಸುನಾಮಿ ಎಚ್ಚರಿಕಾ ಕೇಂದ್ರ ತಿಳಿಸಿದೆ. ಇದನ್ನೂ ಓದಿ : ಕೊಡಗು : ಮತ್ತೆ ಭೂಕಂಪನ – ಆತಂಕದಲ್ಲಿ ಜನ
ಭೂಕಂಪದಿಂದಾಗಿ ಕೆಲವೆಡೆ ಕಟ್ಟಡಗಳು ಕುಸಿತವಾಗಿರುವುದಾಗಿ ವರದಿಯಾಗಿದೆ. ಪೂರ್ವ ಕರಾವಳಿ ಭಾಗದ ರೈಲ್ವೇ ನಿಲ್ದಾಣದಲ್ಲಿ ರೈಲೊಂದು ಹಳಿ ತಪ್ಪಿದ್ದಾಗಿ ತಿಳಿದುಬಂದಿದೆ. ಇಲ್ಲಿಯವರೆಗೆ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ತೈವಾನ್ನ ಭೂಕಂಪದ (Earthquake in Taiwan) ಬಳಿಕ ಜಪಾನ್ನ ಒಕಿನಾವಾ ಪ್ರಾಂತ್ಯದ ಭಾಗದಲ್ಲಿ 1 ಮೀ. ಎತ್ತರದ ಸುನಾಮಿ ಅಲೆಗಳ ಬಗ್ಗೆ ಅಲ್ಲಿನ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ವಿಜಯಪುರದಲ್ಲಿ ಭೂಕಂಪನ : 4.6 ತೀವ್ರತೆ ದಾಖಲು