Actress Deepa : ಯುವ ನಟಿ ದೀಪ ಆತ್ಮಹತ್ಯೆ

Actress Deepa

ಕಾಲಿವುಡ್​ನ ಯುವ ನಟಿ ದೀಪಾ (Actress Deepa) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ವೈಧಾ ಚಿತ್ರದಲ್ಲಿ (Vaidha Film) ಇವರು ನಟಿಸಿದ್ದರು. ಚೆನ್ನೈನ ವಿರುಗಂಬಕ್ಕಮ್ ನಲ್ಲಿರುವ ಅವರ ರೂಮ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ಹಾಗಾಗಿ ಇದೊಂದು ಆತ್ಮಹತ್ಯೆ ಎಂದು ಪೊಲೀಸ್ ನವರು ಶಂಕಿಸಿದ್ದಾರೆ.

Actress Deepa

ನಟಿ ದೀಪಾ ಅವರ ಮೂಲ ಹೆಸರು ಪೌಲಿನ್ ಜೆಸ್ಸಿಕಾ (Pauline Jessica). ದೀಪಾ ಹೆಸರಿನ ಮೂಲಕ ಫೇಮಸ್ ಆಗಿದ್ದರು. ವೈಧಾ, ತುಪ್ಪರಿವಾಲನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಲಗಳ ಪ್ರಕಾರ ದೀಪಾ ಯುವಕನೊಂದಿಗೆ ಪ್ರೀತಿಯಲ್ಲಿ ಸಿಲುಕಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಈ ಪ್ರೀತಿಯಲ್ಲಿ ಎದುರಾದ ತೊಡಕುಗಳನ್ನು ಬಿಡಿಸಿಕೊಳ್ಳಲಾಗಿದೆ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Actress Deepa

ದೀಪಾ (Actress Deepa) ಅವರ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶವಪರೀಕ್ಷೆಗಾಗಿ ಕಳುಹಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಪ್ರೀತಿ, ಪ್ರೇಮದ ವಿಚಾರವಾಗಿಯೇ ಈ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಖ್ಯಾತ ಗೀತರಚನೆಕಾರರ ಮಗಳೊಬ್ಬಳು ಇಂಥದ್ದೇ ಪ್ರೇಮಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.

Actress Deepa

ಕಳೆದ ಕಲೆ ತಿಂಗಳುಗಳ ಹಿಂದೆ ಚೆನ್ನೈ ಹಾಗೂ ಮುಂಬೈನಲ್ಲಿ ಹಲವು ಯುವ ನಟಿಯರು ಹಾಗೂ ಮಾಡೆಲ್​ಗಳು ಸರಣಿ ಆತ್ಮಹತ್ಯೆಗೆ ಶರಣಾಗಿದ್ದರು.

LEAVE A REPLY

Please enter your comment!
Please enter your name here