ನಿತ್ಯವೂ ಮದ್ಯ ಸೇವಿಸಿ ಮಕ್ಕಳಿಗೆ ಪಾಠ – ಗ್ರಾಮಸ್ಥರ ಎದುರೇ ಸಿಕ್ಕಿಬಿದ್ದ ಶಿಕ್ಷಕಿ

ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿಕೊಂಡು ಪಾಠ ಮಾಡುತ್ತಿದ್ದ ಲೇಡಿ ಟೀಚರ್ ಒಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ತುಮಕೂರು ತಾಲೂಕಿನ ಚಿಕ್ಕಸಾರಂಗಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಕಳೆದ 25 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕಿ ಗಂಗಲಕ್ಷ್ಮಮ್ಮ ಸೇವೆ ಸಲ್ಲಿಸುತ್ತಿದ್ದಾಳೆ. ಆದರೆ ಕಳೆದ 5 ವರ್ಷದಿಂದ ಮದ್ಯ ವ್ಯಸನಕ್ಕೆ ದಾಸಳಾಗಿದ್ದಳು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮದ್ಯಪಾನ ಮಾಡಿ ಪಾಠ ಮಾಡಿ, ವಿದ್ಯಾರ್ಥಿಗಳಿಗೆ ಸುಖಾಸುಮ್ಮನೆ ಹೊಡೆಯುವುದು ಹಾಗೂ ಸಹೋದ್ಯೋಗಿಗಳ ಜೊತೆ ಜಗಳ ಮಾಡುತ್ತಿದ್ದಳು. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯುಂಟಾಗಿತ್ತು. ಇದನ್ನು ಮನಗಂಡ ಪೋಷಕರು ಶಿಕ್ಷಕಿ ಗಂಗಲಕ್ಷ್ಮಮ್ಮಗೆ ತಪ್ಪು ತಿದ್ದಿಕೊಳ್ಳುವಂತೆ ತಾಕೀತು ಮಾಡಿದ್ದರು. ಆದರೆ ಗಂಗಲಕ್ಷ್ಮಮ್ಮ ತನ್ನ ಚಾಳಿ ಬದಲಿಸಲಿಲ್ಲ. ಇದರಿಂದ ಪೋಷಕರು ಶಾಲೆಗೆ ಬೀಗ ಹಾಕಿ ಶಿಕ್ಷಕಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಇದನ್ನೂ ಓದಿ : BIG BREAKING: 77 ವರ್ಷದಷ್ಟು ಹಳೆಯ ಸರ್ಕಾರಿ ಶಾಲೆ ಸಮೇತ ಜಾಗ ಮಾರಾಟಕ್ಕೆ ಕ್ರಮ – ಬಿಜೆಪಿ ಸರ್ಕಾರದಲ್ಲಿ ಏನಾಗ್ತಿದೆ

ಈ ವೇಳೆ ಸ್ಥಳಕ್ಕೆ ಬಿ.ಇ.ಒ ಹನುಮಾ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿಕ್ಷಕಿಯ ಟೇಬಲ್‍ನ ಡ್ರಾಯರ್ ಓಪನ್ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದರು. ಡ್ರಾಯರ್​ನಲ್ಲಿ ಒಂದು ಫುಲ್ ಮತ್ತು ಎರಡು ಖಾಲಿ ಮದ್ಯದ ಬಾಟಲ್‍ಗಳು ಪತ್ತೆಯಾಗಿವೆ.

ಪೊಲೀಸರು ಬಂದು ಮದ್ಯದ ಬಾಟಲನ್ನು ವಶಕ್ಕೆ ಪಡೆದಿದ್ದಾರೆ. ಶಿಕ್ಷಕಿ ಗಂಗಲಕ್ಷ್ಮಮ್ಮಳನ್ನು ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ : ಪುಟ್ಟ ವಿದ್ಯಾರ್ಥಿಯೊಂದಿಗೆ ಮಸಾಜ್ ಮಾಡಿಕೊಂಡ ಶಿಕ್ಷಕಿ ಅಮಾನತು

LEAVE A REPLY

Please enter your comment!
Please enter your name here