ಹಂಪಿಯ ವಿಜಯ ವಿಠಲ ಬಜಾರ್ ಬಳಿ ಚಿರತೆ ದಾಳಿಗೆ ಕುದುರೆ ಬಲಿಯಾಗಿರುವ ಘಟನೆ ಇಂದು ಗುರುವಾರ ವರದಿಯಾಗಿದೆ.
ಎಂದಿನಂತೆ ಕುದುರೆ ವಿಹರಿಸುತ್ತಿತ್ತು. ಈ ವೇಳೆ ಚಿರತೆ ಏಕಾಏಕಿ ಎರಗಿ ಕುದುರೆ ಕತ್ತಿನ ಭಾಗದ ಮೇಲೆ ದಾಳಿ ನಡೆಸಿದ್ದರಿಂದ ಸ್ಥಳದಲ್ಲೇ ಜೀವ ಬಿಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಜಯ ವಿಠಲ ದೇವಸ್ಥಾನ ಸಂರಕ್ಷಿತ ಸ್ಮಾರಕವಾಗಿದ್ದು, ಈ ಸ್ಮಾರಕ ಕಣ್ತುಂಬಿಕೊಳ್ಳಲು ನಿತ್ಯ ನೂರಾರು ಜನ ಪ್ರವಾಸಿಗರು ಭೇಟಿ ಕೊಡುತ್ತಾರೆ. ಇಂತಹ ಸ್ಥಳದಲ್ಲಿಯೇ ಚಿರತೆ ದಾಳಿ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ : ಬಿಳಿಗಿರಿ ರಂಗನ ಬೆಟ್ಟದಲ್ಲಿ ಕಪ್ಪು ಚಿರತೆ ಪ್ರತ್ಯಕ್ಷ