ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಬೆಂಗಳೂರಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಪ್ರಧಾನಿಯ ಈ ಭೇಟಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬರೋಬ್ಬರಿ 24 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
24 ಕೋ.ರೂಗಳ ವೆಚ್ಚದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ ಕಾರ್ಕ್ರಮಗಳಿಗೆ ಮಾತ್ರವಲ್ಲದೇ, ಬಿಬಿಎಂಪಿ ರಸ್ತೆಗಳಿಗೆ ಟಾರ್ ಹಾಕುವುದು, ಗುಂಡಿ ಸರಿಪಡಿಸುವುದು, ಹೊಸದಾಗಿ ಟಾರ್ ಮಾಡಿದ ರಸ್ತೆಗಳಲ್ಲಿ ಬಿಳಿ ಬಣ್ಣದ ಗೆರೆ ಹಾಕುವುದು ಹಾಗೂ ಚರಂಡಿಗಳನ್ನು ಮುಚ್ಚುವ ಕೆಲಸಗಳನ್ನೂ ಮಾಡಿದೆ.
ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಅವರು ಈ ಬಗ್ಗೆ ಮಾತನಾಡಿ, ಕೋಮಘಟ್ಟ ಮತ್ತು ಹೆಬ್ಬಾಳ ಸುತ್ತಮುತ್ತಲಿನ ರಸ್ತೆಗಳನ್ನು ಸರಿಪಡಿಸಲು 14 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ನಿನ್ನೆ ಬೆಗಳೂರಿನಲ್ಲಿ ಹಲವು ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮಗಳ ನಂತರ ಕೊಮ್ಮಘಟ್ಟದಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಮೈಸೂರಿಗೆ ತೆರಳಿದ್ದರು.