ನಿಷೇಧಿತ ಸಂಘಟನೆಗಳಾದ ಖಲಿಸ್ತಾನ್ ಲಿಬರೇಶನ್ ಫೋರ್ಸ್ ಮುಖ್ಯಸ್ಥ ಲಖ್ಬೀರ್ ಸಿಂಗ್ ಇಂದು ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾರೆ.
72 ವರ್ಷದ ಲಖ್ಬೀರ್ ಸಿಂಗ್ ರೋಡ್ ಕಾನೂನುಬಾಹಿರ ಚಟುವಟಿಕೆಗಳು ಕಾಯ್ದೆಯಡಿಯಲ್ಲಿ ಭಾರತವು ಭಯೋತ್ಪಾದಕ ಎಂದು ಘೋಷಿಸಿತ್ತು. ಹೀಗಾಗಿ ಭಾರತದಿಂದ ಪಲಾಯನ ಮಾಡಿದ ನಂತರ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದರು.
ಲಖ್ಬೀರ್ ಸಿಂಗ್ ಖಲಿಸ್ತಾನಿ ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಅವರ ಸೋದರಳಿಯರಾಗಿದ್ದರು. ಲಖ್ಬೀರ್ ಸಿಂಗ್ ರೋಡೆ ಅವರ ನಿಧನದ ಸುದ್ದಿಯನ್ನು ಅವರ ಸಹೋದರ ಮತ್ತು ಮಾಜಿ ಅಕಲ್ ತಖ್ತ್ ಜತೇದಾರ್ ಮಾಹಿತಿ ನೀಡಿದ್ದಾರೆ.