ಉಡುಪಿ: ಹೆಡ್​ ಕಾನ್ಸ್​ಸ್ಟೇಬಲ್​ ಆತ್ಮಹತ್ಯೆ

ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸ್​ ಠಾಣೆಯ ಹೆಡ್​ಕಾನ್ಸ್​ಸ್ಟೇಬಲ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 49 ವರ್ಷದ ಪ್ರಕಾಶ್ ಮಿಯಾರು​ ಆತ್ಮಹತ್ಯೆ ಮಾಡಿಕೊಂಡಿರುವ ಪೊಲೀಸ್​ ಸಿಬ್ಬಂದಿ.

ಇವರು ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಕಾಜರಬೈಲು ನಿವಾಸಿ.

ನಗರ ಪೊಲೀಸ್​ ಠಾಣೆಯಲ್ಲಿ ಹೆಡ್​ಕಾನ್ಸ್​ಸ್ಟೇಬಲ್​ ಆಗಿದ್ದ ಇವರು ರಜೆಯಲ್ಲಿದ್ದರು. ಮನೆಯ ಹಿಂಭಾಗದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಲಹೆ: ಆತ್ಮಹತ್ಯೆ ಪರಿಹಾರವಲ್ಲ. ಮಾನಸಿಕ ಒತ್ತಡ ನಿವಾರಣೆಗೆ ಮನೋತಜ್ಞರ ಸಲಹೆ ಪಡೆಯುವುದು ಉತ್ತಮ. ಉಚಿತ ಸಹಾಯವಾಣಿ ಸಂಖ್ಯೆ: 9152987821

LEAVE A REPLY

Please enter your comment!
Please enter your name here