ಫ್ರೀ ಊಟದ ಬಲೆಗೆ ಸಿಲುಕಿ 90ಸಾವಿರ ಕಳ್ಕೊಂಡ ಬ್ಯಾಂಕ್ ಮ್ಯಾನೇಜರ್

ಒಂದು ಊಟ ತಗೊಂಡ್ರೆ ಮತ್ತೊಂದು ಊಟ ಫ್ರೀ.. ನಮ್ಮ ಆಪ್ ಡೌನ್​ಲೋಡ್ ಮಾಡ್ಕೊಳಿ.. ಎಂಬ ಜಾಹೀರಾತು ನಂಬಿದ ದೆಹಲಿಯ ಬ್ಯಾಂಕ್ ಉದ್ಯೋಗಿ ಸವಿತಾಶರ್ಮಾ 90 ಸಾವಿರ ರೂಪಾಯಿ ಕೊಳ್ಕೊಂಡಿದ್ದಾರೆ.

ಬ್ಯಾಂಕ್ ಒಂದರಲ್ಲಿ ಸೀನಿಯರ್ ಎಕ್ಸಿಕ್ಯೂಟೀವ್ ಆಗಿರುವ ಸವಿತಾ ಶರ್ಮಾ ಅವರಿಗೆ ಅವರ ಬಂಧುವೊಬ್ಬರು ಫೇಸ್​ಬುಕ್​ನಲ್ಲಿ ಬಂದ ಫ್ರೀ ಥಾಲಿಯ ಜಾಹೀರಾತಿನ ಬಗ್ಗೆ ತಿಳಿಸಿದರು. ಸವಿತಾ ಶರ್ಮಾ ಅವರಿಗೂ ಒಂದು ಊಟ ಫ್ರೀ ಅಲ್ವಾ ಏಕೆ ಟ್ರೈ ಮಾಡಬಾರದು ಎನಿಸಿತು.

ಕೂಡಲೇ ಸವಿತಾ ಶರ್ಮಾ ಸೈಟ್​ಗೆ ತೆರಳಿ ಅಲ್ಲಿದ್ದ ನಂಬರ್​ಗೆ ಕರೆ ಮಾಡಿದರು. ತಕ್ಷಣಕ್ಕೆ ರೀಪ್ಲೇ ಬರಲಿಲ್ಲ. ನಂತರ ಕರೆ ಮಾಡಿದ ಕಾಲರ್,

ಸಾಗರ್ ರತ್ನ ರೆಸ್ಟೋರೆಂಟ್​ನಿಂದ ಕರೆ ಮಾಡುತ್ತಿದ್ದೇನೆ.. ಒಂದು ಲಿಂಕ್ ಕಳಿಸುತ್ತೇನೆ.. ಡೌನ್​ಲೋಡ್ ಮಾಡ್ಕೊಳಿ ಎಂದರು. ಆಪ್​ಗೆ ಸಂಬಂಧಿಸಿದ ಯೂಸೆರ್ ಐಡಿ, ಪಾಸ್​ವರ್ಡ್ ಕಳಿಸಿದರು.

ಫ್ರೀ ಥಾಲಿ ಆಫರ್ ಉಪಯೋಗಿಸಿಕೊಳ್ಳುವ ಮುನ್ನ ಈ ಆಪ್ ಡೌನ್​ಲೋಡ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಳ್ಳಬೇಕು ಎಂದರು. ಅವರು ಹೇಳಿದ್ದೆಲ್ಲವನ್ನು ಮಾಡಿದೆ.

ಆ ಸಮಯದಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬುದು ನನ್ನ ಅರಿವಿಗೆ ಬರಲಿಲ್ಲ.. ಆ ನಂತರ ನನ್ನ ಬ್ಯಾಂಕ್ ಖಾತೆಯಿಂದ 40,000 ರೂ. ಮತ್ತೊಮ್ಮೆ 50,000 ರೂ. ಡ್ರಾ ಆಗಿದೆ ಎಂಬ ಸಂದೇಶಗಳು ಬಂದವು.

ಆ ಹಣ ನನ್ನ ಕ್ರೆಡಿಟ್ ಕಾರ್ಡ್​​ನಿಂದ ನನ್ನ ಪೇಟಿಎಂಗೆ ಹೋಗಿ.. ವಂಚಕನ ಖಾತೆ ಸೇರಿದ್ದು ನನಗೆ ಅಚ್ಚರಿಯುಂಟು ಮಾಡಿದೆ. ಆ ವಿವರಗಳನ್ನು ಕಾಲರ್ ನನಗೆ ತಿಳಿಸಲಿಲ್ಲ. ನಾನು ಕೂಡಲೇ ನನ್ನ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿಸಿದೆ ಎಂದು ದೂರಿನಲ್ಲಿ ಸವಿತಾ ಶರ್ಮಾ ತಿಳಿಸಿದ್ದಾರೆ.