ಮಗಳು ಹುಟ್ಟಿದ ಖುಷಿಯಲ್ಲಿ ಆನೆ ಮೇಲೆ ಮೆರವಣಿಗೆ

ಆ ವಂಶದಲ್ಲಿ 95 ವರ್ಷಗಳ ನಂತರ ಹೆಣ್ಣು ಮಗು ಜನಿಸಿದೆ. ಈ ಸಂಭ್ರಮದಲ್ಲಿ ತಮ್ಮ ಮಗಳನ್ನು ಆನೆ ಮೇಲೆ ಮೆರವಣಿಗೆ ಮಾಡಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪಚ್​ಗಾಂವ್​ನಲ್ಲಿ ನೆಲೆಸಿರುವ ಗಿರೀಶ್ ಪಾಟೀಲ್​​ಗೆ ಐದು ತಿಂಗಳ ಹಿಂದೆ ಹೆಣ್ಮಗು ಜನಿಸಿದೆ.

ಮುದ್ದು ಮಗಳಿಗೆ ಮುದ್ದು ಮುದ್ದಾದ ಐರಾ ಎಂಬ ಹೆಸರನ್ನು ಇಟ್ಟಿದ್ದಾರೆ. ಮೊದಲ ಬಾರಿ ಐರಾಳನ್ನು ತಮ್ಮ ಮನೆಗೆ ಗಿರೀಶ್ ಪಾಟೀಲ್ ಶನಿವಾರ ಕರೆತಂದಿದ್ದಾರೆ.

ಈ ಕ್ಷಣ ಎಂದೆಂದಿಗೂ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಐರಾಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ. ಆನೆಯ ಮೇಲೆ ಮಗಳನ್ನು ಕೂರಿಸಿಕೊಂಡು ಊರೆಲ್ಲಾ ಮೆರವಣಿಗೆ ಹೋಗಿದ್ದಾರೆ.

ತುಂಬಾ ವರ್ಷಗಳ ನಂತರ ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದೆ ಎಂಬ ಸಂಭ್ರಮದಲ್ಲಿ ಇಡೀ ಕುಟುಂಬವಿದೆ.