ಚೀನಾದ ಹ್ಯಾಂಗ್ಜೂನಲ್ಲಿ ಇದೇ ಸೆಪ್ಟಂಬರ್ನಲ್ಲಿ ನಡೆಯಬೇಕಿದ್ದ 2022 ರ ಏಷ್ಯನ್ ಗೇಮ್ಸ್ ಅನ್ನು ಅನಿರ್ಧಿಷ್ಟ ದಿನಾಂಕದವರೆಗೆ ಮುಂದೂಡಿಕೆ ಮಾಡಿದೆ.
ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಏಷ್ಯನ್ ಗೇಮ್ಸ್ ಮುಂದೂಡಿಕೆ ಚೀನಾ ನಿರ್ಧಿಷ್ಟವಾಗಿ ಯಾವುದೇ ಕಾರಣಗಳನ್ನು ನೀಡಿಲ್ಲ. ಆದರೆ, ಚೀನಾದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.