Corona Case: ಕರ್ನಾಟಕದಲ್ಲಿ ಸೋಂಕು ಹೆಚ್ಚಳ – ಮತ್ತೆ ಕೆಲವೊಂದಿಷ್ಟು ನಿರ್ಬಂಧ ಬಗ್ಗೆ ಯೋಚನೆ

ಕರ್ನಾಟಕದಲ್ಲಿ ಕೋವಿಡ್​ ಸೋಂಕಿನ (Corona Case) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲವೊಂದಿಷ್ಟು ಬಿಗಿಕ್ರಮಗಳನ್ನು ಮತ್ತೆ ಜಾರಿಗೊಳಿಸಬಹುದು ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ರಾಜ್ಯದಲ್ಲಿ ಮಾಸ್ಕ್​ ಕಡ್ಡಾಯ (Mask Fine) ಮಾಡಲಾಗಿದೆಯಾದರೂ ದಂಡ ವಿಧಿಸುತ್ತಿಲ್ಲ.
ಆದರೆ ಸೋಂಕಿನ ಪ್ರಮಾಣ ಏರುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್​ ಹಾಕದೇ ಇದ್ದರೆ ಮತ್ತೆ ದಂಡ ವಿಧಿಸುವ ಕ್ರಮ ಜಾರಿಗೊಳಿಸುವ ಸಾಧ್ಯತೆ ಇದೆ.
ಈ ಹಿಂದೆ ನಗರ ಪ್ರದೇಶದಲ್ಲಿ ಮಾಸ್ಕ್​ ಹಾಕದೇ ಇದ್ದರೆ 250 ರೂಪಾಯಿ ಮತ್ತು ಗ್ರಾಮೀಣ ಭಾಗದಲ್ಲಿ 100 ರೂಪಾಯಿ ದಂಡ ವಿಧಿಸಲಾಗ್ತಿತ್ತು.
145 ದಿನಗಳ ಬಳಿಕ ಕರ್ನಾಟಕದಲ್ಲಿ ಮೊದಲ ಬಾರಿಗೆ 24 ಗಂಟೆಯಲ್ಲಿ ಸೋಂಕಿಗೆ ಐವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ:

Mysuru Dasara: ನಾಡಹಬ್ಬ ದಸರಾ: ಹೆಣ್ಣಾನೆ-ಗಂಡಾನೆಗಳ ತೂಕ ಎಷ್ಟು ಗೊತ್ತಾ..?

 

ಆರೋ್ಗ್ಯ ಸಚಿವ ಡಾ ಕೆ ಸುಧಾಕರ್​ (Dr K Sudhakar) ಅವರಿಗೆ ಹುಷಾರಿಲ್ಲದ ಕಾರಣ ನಿನ್ನೆ ನಡೆಯಬೇಕಿದ್ದ ಕೋವಿಡ್​ ಕಾರ್ಯಪಡೆ ಸಭೆ ಮುಂದೂಡಿಕೆ ಆಗಿತ್ತು.
ಗಣೇಶ ಚತುರ್ಥಿ ಹಬ್ಬಕ್ಕೆ ಕೆಲವೊಂದಿಷ್ಟು ನಿರ್ಬಂಧ ಹೇರುವ ಬಗ್ಗೆಯೂ ಸರ್ಕಾರ ಯೋಚಿಸುವ ಸಾಧ್ಯತೆ ಇದೆ.
24 ಗಂಟೆಯಲ್ಲಿ ಕರ್ನಾಟಕದಲ್ಲಿ 1,680 ಮಂದಿಗೆ ಸೋಂಕು ಹಬ್ಬಿದೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇಕಡಾ 6.58ಕ್ಕೆ ಏರಿಕೆ ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 10,351ಕ್ಕೆ ಏರಿಕೆ ಆಗಿದೆ.
ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಮಾಣವೂ ಹೆಚ್ಚಿದೆ. ಬಿ ಎ 5 ರೂಪಾಂತರ ತಳಿ ರಾಜ್ಯದಲ್ಲಿ ವೇಗವಾಗಿ ಹಬ್ಬುತ್ತಿದೆ ಮತ್ತು ಮೊದಲೆರಡು ಡೋಸ್​ ಜೊತೆಗೆ ಬೂಸ್ಟರ್​ ಲಸಿಕೆ ಹಾಕಿಸಿಕೊಂಡವರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here