BIG RESULT: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್​​ಗೆ ಅತೀ ದೊಡ್ಡ ಐತಿಹಾಸಿಕ ಗೆಲುವು

ಮಹಾರಾಷ್ಟ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಕಾಂಗ್ರೆಸ್​ ಇತ್ತ ಪಶ್ವಿಮ ಬಂಗಾಳದಲ್ಲಿ ಅತೀ ದೊಡ್ಡ ಐತಿಹಾಸಿಕ ಗೆಲುವು ಸಾಧಿಸಿದೆ.

ಪಶ್ಚಿಮ ಬಂಗಾಳದ ಸಾಗರ್​ದಿಘಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ 22,980  ಮತಗಳಿಂದ ಪ್ರಚಂಡ ಜಯ ಸಾಧಿಸಿದ್ದಾರೆ.

ಈ ಕ್ಷೇತ್ರದಲ್ಲಿ ಕೊನೆಯ ಬಾರಿ ಕಾಂಗ್ರೆಸ್​ ಗೆದ್ದಿದ್ದು 1972. 50 ವರ್ಷಗಳ ಬಳಿಕ ಈ ಕ್ಷೇತ್ರವನ್ನು ಮತ್ತೆ ಗೆಲ್ಲುವ ಮೂಲಕ ಕಾಂಗ್ರೆಸ್​ ಐತಿಹಾಸಿಕ ಗೆಲುವು.

ಕಾಂಗ್ರೆಸ್​ ಅಭ್ಯರ್ಥಿ ಬೇರಾನ್​ ಬಿಸ್ವಾಸ್​ ಅವರು ಆಡಳಿತಪಕ್ಷ ತೃಣಮೂಲ ಕಾಂಗ್ರೆಸ್​ನ ಅಭ್ಯರ್ಥಿ ದೇಬ್​ಶೀಶ್​ ಬ್ಯಾನರ್ಜಿ ಅವರನ್ನು ಸೋಲಿಸಿದ್ದಾರೆ.

2021ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳಾಗಲೀ ಕಾಂಗ್ರೆಸ್​ ಆಗಲೀ ಒಂದೇ ಒಂದು ಸೀಟು ಗೆದ್ದಿರಲಿಲ್ಲ. 

ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕೊನೆಗೂ ವಿಧಾನಸಭೆಯಲ್ಲಿ ಕಾಂಗ್ರೆಸ್​ ತನ್ನ ಖಾತೆ ತೆರೆದಿದೆ.

ಉಪ ಚುನಾವಣೆಯಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್​ ಮೈತ್ರಿ ಮಾಡಿಕೊಂಡಿದ್ದವು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ವಿರೋಧಿ ಮತಗಳು ಬಿಜೆಪಿ ಬದಲಿಗೆ ಎಡಪಕ್ಷ ಮತ್ತು ಕಾಂಗ್ರೆಸ್​ ವಾಲುತ್ತಿರುವ ಸುಳಿವು ಇದಾಗಿದೆ.

LEAVE A REPLY

Please enter your comment!
Please enter your name here