ಕರ್ನಾಟಕದಲ್ಲಿ ಕಾಂಗ್ರೆಸ್ ಅತ್ಯಧಿಕ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲಲಿದೆ ಎಂದು ಪ್ರಮುಖ ಚುನಾವಣಾ ವಿಶ್ಲೇಷಕ ಪಾರ್ಥದಾಸ್ ಅವರು ಅಂದಾಜಿಸಿದ್ದಾರೆ.
ಪಾರ್ಥದಾಸ್ ಅವರ ಪ್ರಕಾರ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಮತದಾರರು ಕಾಂಗ್ರೆಸ್ನ ಕಡೆಗೆ ವಾಲಿದ್ದಾರೆ.
ಮಹಿಳಾ ಮತದಾರರ ಪೈಕಿ ಬಿಜೆಪಿ-ಜೆಡಿಎಸ್ಗೆ ಹೋಲಿಸಿದ್ರೆ ಶೇಕಡಾ 15ರಿಂದ 20ರಷ್ಟು ಮತದಾರರು ಕಾಂಗ್ರೆಸ್ನ ಕಡೆಗೆ ಒಲವು ಹೊಂದಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದ್ದಾರೆ.
ಇವರ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್ 17ರಿಂದ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬಹುದು. ಬಿಜೆಪಿ ಮತ್ತು ಜೆಡಿಎಸ್ 8 ರಿಂದ 11 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬಹುದು.
ಅಂದರೆ ಕಳೆದ ಬಾರಿಗೆ ಹೋಲಿಸಿದ್ರೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ 19ರಿಂದ 16 ಸೀಟುಗಳ ನಷ್ಟವಾಗಬಹುದು ಎಂದು ಅಂದಾಜಿಸಿದ್ದಾರೆ.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಪಾರ್ಥದಾಸ್ ಅವರು ಅತ್ಯಂತ ನಿಖರವಾಗಿ ಅಂದಾಜು ಮಾಡಿದ್ದರು.
ADVERTISEMENT
ADVERTISEMENT