ನಾವು ನುಡಿದಂತೆ ನಡೆಯುವವರು. ಬಿಜೆಪಿ ಮತ್ತು ಮೋದಿಯವರು ನೀಡಿದ ಭರವಸೆಗಳ ಬಗ್ಗೆ ಎಷ್ಟು ಚರ್ಚೆ ಮಾಡಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳನ್ನು ಪ್ರಶ್ನಿಸಿದ್ದಾರೆ.
ಗೊಂದಲಗಳೆಲ್ಲ ಬಗೆಹರಿದಿವೆ, ದಯವಿಟ್ಟು ನೀವು ಗೊಂದಲ ಸೃಷ್ಟಿಸಬೇಡಿ. ನಮ್ಮ ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡ್ತಿದ್ದೀರಿ. ನೀವೇ ಗೊಂದಲ ಸೃಷ್ಟಿ ಮಾಡಿದ್ದೀರಿ. ಬಿಜೆಪಿಯವರು ಪ್ರಣಾಳಿಕೆಯಲ್ಲಿ 600 ಭರವಸೆ ಕೊಟ್ಟಿದ್ರು, ಅದರ ಬಗ್ಗೆ ಎಷ್ಟು ಚರ್ಚೆ ಮಾಡಿದ್ದೀರಿ, ಎಷ್ಟು ಜಾರಿ ಆದ್ವು ಅಂತ ಚರ್ಚೆ ಮಾಡಿದ್ದೀರಿ. ನರೇಂದ್ರ ಮೋದಿಯವರು ಭರವಸೆ ಕೊಟ್ಟಿದ್ರಲ್ಲ ಎಷ್ಟು ಚರ್ಚೆ ಆದ್ವು. ನಾವು ನುಡಿದಂತೆ ನಡೆಯುವವರು, ಏನು ಹೇಳಿದ್ದೀವೋ ಮಾಡೇ ಮಾಡ್ತೀವಿ.