ADVERTISEMENT
ಒಂದು ವೇಳೆ ಬಂಧನಕ್ಕೊಳಗಾದ್ರೆ ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಕೊಡ್ಬೇಕಾ..?
ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಆಮ್ ಆದ್ಮಿ ಪಕ್ಷ ನಿರ್ಧಾರ ಮಾಡಿದೆ.
ಡಿಸೆಂಬರ್ 1ರಿಂದ ಡಿಸೆಂಬರ್ 20ರವರೆಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ತೀರ್ಮಾನ ಮಾಡಿದೆ.
ನಾನೂ ಕೇಜ್ರಿವಾಲ್ ಅಭಿಯಾನದ ಅಡಿಯಲ್ಲಿ ದೆಹಲಿ ನಗರದ 2,600 ಮತಗಟ್ಟೆಗಳಲ್ಲಿ ಕರಪತ್ರವನ್ನು ಹಂಚಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.
ಇದರ ಜೊತೆಗೆ ಡಿಸೆಂಬರ್ 21ರಿಂದ ಡಿಸೆಂಬರ್ 24ರವರೆಗೆ ದೆಹಲಿಯಲ್ಲಿ ಜನ ಸಂವಾದ ಕಾರ್ಯಕ್ರಮ ಮೂಲಕ ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್ ಅವರನ್ನು ಸಿಲುಕಿಸಲು ಬಿಜೆಪಿ ನಡೆಸುತ್ತಿರುವ ಸಂಚಿನ ವಿರುದ್ಧ ಜನಾಭಿಪ್ರಾಯ ಮೂಡಿಸುವುದಕ್ಕೂ ಆಪ್ ನಿರ್ಧಾರ ಮಾಡಿದೆ.
ದೆಹಲಿ ಅಬಕಾರಿ ಹಗರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಿತ್ತು.
ಅಬಕಾರಿ ಹಗರಣದಲ್ಲಿ ಈಗಾಗಲೇ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನದಲ್ಲಿದ್ದಾರೆ. ಸುಪ್ರೀಂಕೋರ್ಟ್ ಕೂಡಾ ಸಿಸೋಡಿಯಾಗೆ ಜಾಮೀನು ನಿರಾಕರಿಸಿದೆ.
ADVERTISEMENT