ವಿಧಾನಸಭಾ ಚುನಾವಣೆ ಹಿನ್ನೆಲೆ: ಮಠ, ದೇವಸ್ಥಾನಗಳಿಗೆ 1 ಸಾವಿರ ಕೋಟಿ ರೂ. ಅನುದಾನ

ಮುಂದಿನ ತಿಂಗಳಲ್ಲೇ ವಿಧಾನಸಭಾ ಚುನಾವಣೆ ಘೋಷಣೆ ಆಗಲಿರುವ ಹಿನ್ನೆಲೆಯಲ್ಲಿ ತಮ್ಮ ಕೊನೆಯ ಬಜೆಟ್​​ನಲ್ಲಿ  ಬಿಜೆಪಿ ಸರ್ಕಾರ ಮಠಗಳು ಮತ್ತು ದೇವಸ್ಥಾನಗಳಿಗೆ ಅನುದಾನ ಘೋಷಿಸಿದೆ.
ಕಳೆದ ಬಜೆಟ್​ನಲ್ಲಿ ಮಠಗಳು ಮತ್ತು ದೇವಸ್ಥಾನಗಳಿಗೆ 425 ಕೋಟಿ ರೂಪಾಯಿ ಅನುದಾನ ನೀಡಿತ್ತು.
ಆದರೆ ಮುಂದಿನ 2 ವರ್ಷಗಳಲ್ಲಿ ಮಠ ಮತ್ತು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 1 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಸಿಎಂ ಬೊಮ್ಮಾಯಿ ಬಜೆಟ್​ನಲ್ಲಿ ಘೋಷಿಸಿದ್ದಾರೆ.
ಈ ವರ್ಷ ಮತ್ತು ಮುಂದಿನ ವರ್ಷ ಸರ್ಕಾರ ಕೊಡುವ ಅನುದಾನ ಎರಡನ್ನೂ ಬೊಮ್ಮಾಯಿ ತಮ್ಮ ಬಜೆಟ್​ನಲ್ಲಿ ಘೋಷಿಸಿದ್ದಾರೆ.
ಮುಜರಾಯಿ ಇಲಾಖೆಯ ದೇವಾಲಯಗಳ ಇನಾಂ ಜಮೀನುಗಳ ವರ್ಷಾಶನವನ್ನು 49 ಸಾವಿರ ರೂಪಾಯಿಗಳಿಂದ 60 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.

LEAVE A REPLY

Please enter your comment!
Please enter your name here