ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಕೊನೆಯ ಬಜೆಟ್ನ್ನು ಮಂಡಿಸಿದ್ದಾರೆ. ಬಿಜೆಪಿ ಸರ್ಕಾರದ ಕೊನೆಯ ಬಜೆಟ್ನಲ್ಲಿ ರೈತರಿಗೆ ಸಿಕ್ಕಿದ್ದೇನು..?
– ಬಡ್ಡಿ ರಹಿತ ಅಲ್ಪಾವಧಿ ಸಾಲದ ಮೊತ್ತ 3 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಹೆಚ್ಚಳ
– ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಯೋಜನೆಯಡಿ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಖರೀದಿಗೆ 10 ಸಾವಿರ ರೂಪಾಯಿ ಸಹಾಯಧನ – 50 ಲಕ್ಷ ರೈತರಿಗೆ ಲಾಭ
– ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಜೀವನ್ಜ್ಯೋತಿ ವಿಮೆ ಯೋಜನೆ – 180 ಕೋಟಿ ರೂ. ಅನುದಾನ
– 100 ಹಾರ್ವೆಸ್ಟರ್ಗಳ ಖರೀದಿಗೆ 50 ಲಕ್ಷ ರೂಪಾಯಿಯಂತೆ 50 ಕೋಟಿ ರೂಪಾಯಿ
– ಇಸ್ರೋ ಸಹಯೋಗದೊಂದಿಗೆ ಡಿಜಿಟಲ್ ಕೃಷಿಗೆ 50 ಕೋಟಿ ರೂಪಾಯಿ
– ರೈತ ಉತ್ಪಾದಕ ಸಂಸ್ಥೆಗಳಿಗೆ 10 ಲಕ್ಷ ರೂ.ವರೆಗಿನ ಬಂಡವಾಳಕ್ಕೆ ಬಡ್ಡಿ ಸಹಾಯಧನ
– ರೈತ ಸಿರಿ ಯೋಜನೆಯಡಿ ಕಿರುಧಾನ್ಯಗಳ ಬೆಳೆಗಾರರಿಗೆ ವರ್ಷಕ್ಕೆ ಪ್ರತಿ ಹೆಕ್ಟೇರ್ಗೆ 10 ಸಾವಿರ ಪ್ರೋತ್ಸಾಹ ಧನ
– ಪ್ರತಿ ತಾಲೂಕಿನಲ್ಲಿ 50 ಹೆಕ್ಟರ್ಗಳಲ್ಲಿ ನೈಸರ್ಗಿಕ ಕೃಷಿಗೆ ನೆರವು
– ರೈತರು ತಮ್ಮ ಜಮೀನಿನಲ್ಲಿ ಜಲ ಹೊಂಡ ನಿರ್ಮಿಸಲು ಜಲ ನಿಧಿ ಯೋಜನೆಯಡಿ ನೆರವು – ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಹೊಂಡ ಕಾರ್ಯಕ್ರಮಕ್ಕೆ ಬದಲಿ ನಾಮಕರಣ
ADVERTISEMENT
ADVERTISEMENT