ರಾಮನವಮಿ ಪ್ರಯುಕ್ತ ಕೈಗೊಂಡ ಯಾತ್ರೆಯ ವೇಳೆ ನಾಲ್ಕು ರಾಜ್ಯಗಳಾದ ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ನಲ್ಲಿ ಹಿಂಸಾಚಾರ ನಡೆದಿದೆ. ಹಿಂಸಾಚಾರದಲ್ಲಿ ಗುಜರಾತ್ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಷ್ಟಿçÃಯ ಮಾಧ್ಯಮಗಳು ವರದಿ ಮಾಡಿವೆ.
ಮಧ್ಯಪ್ರದೇಶದ ಖರಗೋನೆಯಲ್ಲಿ ಹಿಂಸಾಚಾರ ಹಿನ್ನೆಲೆಯಲ್ಲಿ ಕರ್ಫ್ಯೂ ಹೇರಲಾಗಿದೆ. ಕಲ್ಲು ತೂರಾಟ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ನಾಲ್ಕು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ದೇವಸ್ಥಾನವನ್ನೂ ಧ್ವಂಸಗೊಳಿಸಿರುವ ಬಗ್ಗೆ ವರದಿ ಆಗಿದೆ. ಪೊಲೀಸ್ ಅಧಿಕಾರಿಯೇ ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ.
ಗುಜರಾತ್ನಲ್ಲಿ ಆನಂದ್ ಜಿಲ್ಲೆಯ ಖಂಬಾತ್ ಮತ್ತು ಸಬರ್ಕಾಂತ್ ಜಿಲ್ಲೆಯ ಹಿಮ್ಮತ್ನಗರದಲ್ಲಿ ಗಲಾಟೆ ಆಗಿದೆ. ಕಲ್ಲು ತೂರಾಟ ಸೇರಿದಂತೆ ಗಲಭೆ ಆಗಿರುವ ಬಗ್ಗೆ ವರದಿ ಆಗಿದೆ. ಗಲಭೆ ಸ್ಥಳದಲ್ಲಿ 65 ವರ್ಷದ ವ್ಯಕ್ತಿಯ ಮೃತದೇಹ ಕೂಡಾ ಸಿಕ್ಕಿದೆ. ಹಲವು ಅಂಗಡಿಗಳು ಮತ್ತು ವಾಹನಗಳನ್ನು ಧ್ವಂಸಗೊಳಿಸಲಾಗಿದೆ.
ಪಶ್ಚಿಮ ಬಂಗಾಳ ಜಿಲ್ಲೆಯ ಹೌರಾದ ಶಿಬುರ್ ಏರಿಯಾದಲ್ಲಿ ಗಲಾಟೆ ಆಗಿದ್ದು ಅಪಾರ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಜಾರ್ಖಂಡ್ ರಾಜ್ಯದ ಲೋಹರ್ದಾಗಾದಲ್ಲಿ ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ.