ಸಿನಿಮಾ-ರಾಜಕೀಯ.. ವಿವಾಹ ಬಂಧ..

ರಾಜಕೀಯಕ್ಕೂ ಸಿನಿಮಾ ಲೋಕಕ್ಕೂ ಬಿಡಿಸಲಾಗದ ನಂಟಿದೆ. ಕೆಲ ಸಿನಿ ತಾರೆಯರು ತಮ್ಮ ಪಾಪುಲಾರಿಟಿ ಬಳಸಿಕೊಂಡು ರಾಜಕೀಯ ನಾಯಕರಾಗಿ, ಇನ್ನೂ ಕೆಲವರು ಕಿಂಗ್ ಮೇಕರ್ ಗಳಾಗಿ ಬೆಳೆಯಲು ನೋಡುತ್ತಿದ್ದಾರೆ. ಇನ್ನೂ ಕೆಲವರು ರಾಜಕೀಯ ನಾಯಕರನ್ನು ಮದುವೆ ಆಗಿ ಲೈಫಲ್ಲಿ ಸೆಟಲ್ ಆಗುತ್ತಿದ್ದಾರೆ. ಹೀಗೆ ಪೊಲಿಟಿಶಿಯನ್ಸ್ ಲೈಫಲ್ಲಿ ಭಾಗಿದಾರರಾದ ನಟಿಯರು ಯಾರು ಎನ್ನುವುದನ್ನು ನೋಡೋಣ.

ನಟಿ ಪರಿಣಿತಿ ಚೋಪ್ರಾ – ಎಎಪಿ ಸಂಸದ ರಾಘವ್ ಚಡ್ಡಾ

ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ ಕಳೆದ ಕೆಲವು ದಿನಗಳಿಂದ ಆಮ್​ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಜೊತೆ ಲವ್ ಅಫೇರ್ ನಲ್ಲಿ ಇದ್ದರು.. ಇದೀಗ ಇವರಿಬ್ಬರ ನಿಶ್ಚಿತಾರ್ಥ ನಡೆದಿದೆ. ಶೀಘ್ರವೇ ತಾರಾಜೋಡಿಯ ಕಲ್ಯಾಣ ನಡೆಯಲಿದೆ.

ಸ್ವರಾಭಾಸ್ಕರ್ – ಫಹಾದ್ ಅಹ್ಮದ್

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಇರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚಿಗಷ್ಟೇ ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ರನ್ನು ಲವ್ ಮಾಡಿ ಮದುವೆಯಾಗಿದ್ದಾರೆ.

ಆಯೆಷಾ ಟಕಿಯಾ – ಫರ್ಹಾನ್ ಅಜ್ನಿ

ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಸದ್ದು ಮಾಡಿದ್ದ ನಟಿ ಆಯೆಷಾ ಟಕಿಯಾ.. 2009ರಲ್ಲಿ ಪರ್ಹಾನ್ ಅಜ್ನಿಯನ್ನು ಮದುವೆಯಾದರು. ಫರ್ಹಾನ್ ಕೂಡ ಸಮಾಜವಾದಿ ಪಕ್ಷದ ಯುವ ನೇತಾರ.

ನವನೀತ್ ಕೌರ್ – ರವಿ ರಾಣಾ

ಕನ್ನಡದಲ್ಲಿ ನಟ ಸುದೀಪ್ ಜೊತೆ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಟಾಲಿವುಡ್ ನಟಿ ನವನೀತ್ ಕೌರ್.. ಮಹಾರಾಷ್ಟ್ರದ ಅಮರಾವತಿಗೆ ಸೇರಿದ ರಾಜಕೀಯ ನಾಯಕ, ಶಾಸಕ ರವಿರಾಣಾ ಅವರನ್ನು ವಿವಾಹವಾಗಿದ್ದಾರೆ. 2019ರಲ್ಲಿ ಸಂಸದೆಯಾಗಿ ಚುನಾಯಿತರಾಗಿದ್ದಾರೆ.

ರಾಧಿಕಾ-ಕುಮಾರಸ್ವಾಮಿ

ಸ್ಯಾಂಡಲ್​ವುಡ್ ನಟಿ ರಾಧಿಕಾ ಅವರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯನ್ನು ಮದುವೆಯಾಗಿದ್ದರು. ಆದರೆ, ಈ ವಿವಾಹ ಬಂಧ ಬಹಳ ದಿನ ಉಳಿಯಲಿಲ್ಲ