ಅಹಮದಾಬಾದ್ ಸ್ಟೇಡಿಯಂನಲ್ಲಿ ಇವತ್ತು ಐಪಿಎಲ್ (IPL) ಕಿರೀಟಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮತ್ತು ಗುಜರಾತ್ ಟೈಟನ್ಸ್ (Gujrat Titans) ಅಂತಿಮ ಪಂದ್ಯ ಪಡೆಯಲಿದೆ.
ಒಂದು ವೇಳೆ ಇವತ್ತು ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫೈನಲ್ (IPL Finale) ಗೆದ್ದರೆ ಸಿಎಸ್ಕೆ ಹಲವು ದಾಖಲೆಗಳನ್ನು ನಿರ್ಮಿಸಲಿದೆ.
ಸಿಎಸ್ಕೆ ಇಲ್ಲಿಯವರೆಗೆ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಐದು ಬಾರಿ ಐಪಿಎಲ್ ಫೈನಲ್ನಲ್ಲಿ ಸೋತಿದೆ. ಮೂರು ಬಾರಿ ಮುಂಬೈ ಇಂಡಿಯನ್ಸ್, (Mumbai Indians) ಒಂದು ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Night Riders) ಮತ್ತು ರಾಜಸ್ಥಾನ ರಾಯಲ್ಸ್ (Rajasthan Royals) ಎದುರು ಫೈನಲ್ನಲ್ಲಿ ಸೋತಿದೆ.
ಒಂದು ವೇಳೆ ಇವತ್ತು ಗುಜರಾತ್ ಟೈಟನ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ಗೆದ್ದರೆ ಆಗ ಐದು ಬಾರಿ ಟ್ರೋಫಿ ಗೆದ್ದ ಹೆಗ್ಗಳಿಕೆಯನ್ನು ಮುಂಬೈ ಇಂಡಿಯನ್ಸ್ ಜೊತೆಗೆ ಹಂಚಿಕೊಳ್ಳಲಿದೆ.
2013, 2015, 2017, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ ಗೆದ್ದಿದೆ. 2010, 2011, 2018, 2021ರಲ್ಲಿ ಚೆನ್ನೈ ಟ್ರೋಫಿ ಗೆದ್ದಿದೆ.
ಈ ಮೂಲಕ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (Rohit Sharma) ಅವರಂತೆ ಧೋನಿ (Mahendra Singh Dhoni) ಕೂಡಾ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆ ಕೂಡಾ ಸಿಗಲಿದೆ.
ಒಂದು ವೇಳೆ ಸಿಎಸ್ಕೆ ಇವತ್ತು ಟ್ರೋಫಿ ಗೆದ್ದರೆ ಆಗ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್ ಗೆದ್ದ ತಂಡವೊಂದರ ಅತ್ಯಂತ ಹಿರಿಯ ವಯಸ್ಸಿನ ನಾಯಕ ಎಂದು ದಾಖಲೆ ನಿರ್ಮಿಸಲಿದ್ದಾರೆ. ಧೋನಿ ಅವರ ವಯಸ್ಸು ಈಗ 41.
ಒಂದು ವೇಳೆ ಸಿಎಸ್ಕೆ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರು ಇವತ್ತಿನ ಫೈನಲ್ ಪಂದ್ಯದಲ್ಲಿ 36 ರನ್ಗಿಂತ ಅಧಿಕ ರನ್ ಗಳಿಸಿ ಸಿಎಸ್ಕೆ ಟ್ರೋಫಿ ಗೆದ್ದರೆ ಆಗ ಐಪಿಎಲ್ ಗೆದ್ದದ ತಂಡದ ಬ್ಯಾಟ್ಸ್ಮನ್ 600ಕ್ಕೂ ಅಧಿಕ ರನ್ ಗಳಿಸಿದ ಎರಡೆರಡು ಬಿರುದು ಸಿಗಲಿದೆ.
2021ರಲ್ಲಿ ಚೆನ್ನೈ ಐಪಿಎಲ್ ಟ್ರೋಫಿ ಗೆದ್ದಾಗ ರುತುರಾಜ್ ಗಾಯಕ್ವಾಡ್ 635 ರನ್ ಗಳಿಸಿದ್ದರು. ಈ ಸೀಸನ್ನಲ್ಲಿ 564 ರನ್ ಗಳಿಸಿದ್ದಾರೆ.
ADVERTISEMENT
ADVERTISEMENT