ADVERTISEMENT
ಮೊದಲ ದಲಿತ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರನ್ನು ಕರೆಯದೇ ಸಂಸತ್ತಿನ ಹೊಸ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಮೊಟಕಿದ್ದಾರೆ.
ಸಂಸತ್ತು ಜನರ ಧ್ವನಿ. ಆದರೆ ಪ್ರಧಾನಿಯವರು ಸಂಸತ್ತಿನ ಕಟ್ಟಡದ ಉದ್ಘಾಟನೆಯನ್ನು ರಾಜಾಭಿಷೇಕ ಎಂದು ಭಾವಿಸಿದ್ದಾರೆ
ಎಂದು ರಾಹುಲ್ ಗಾಂಧಿ ಅವರು ಮೊನಚಾದ ಟ್ವೀಟ್ನ್ನು ಮಾಡಿದ್ದಾರೆ.
ಸಂಸತ್ತಿನ ಕಟ್ಟಡದ (New Parliament Building) ಉದ್ಘಾಟನೆಗೆ ಭಾರತ ರಾಜ್ಯಾಂಗದ ಮುಖ್ಯಸ್ಥರೂ ಆಗಿರುವ ಮೊದಲ ದಲಿತ ಮಹಿಳಾ ರಾಷ್ಟ್ರಪತಿ ಆಗಿರುವ ದ್ರೌಪದಿ ಮುರ್ಮು ಅವರನ್ನು ಪ್ರಧಾನಿ ಮೋದಿ ಸರ್ಕಾರ ಆಹ್ವಾನಿಸಿಲ್ಲ.
ಸಂಸತ್ತಿನ ಕಟ್ಟಡದ ಉದ್ಘಾಟನೆ ಬಳಿಕ ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳುಹಿಸಿದ ಸಂದೇಶವನ್ನು ಓದಿದರು.
ರಾಷ್ಟ್ರಪತಿಗಳಿಗೆ ಆಹ್ವಾನ ನೀಡದೇ ಉದ್ಘಾಟನೆ ಮಾಡ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಒಳಗೊಂಡಂತೆ ದೇಶದ ಪ್ರಮುಖ 19 ವಿರೋಧ ಪಕ್ಷಗಳು ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿವೆ.
ADVERTISEMENT