ಮೈಸೂರಿನ ಚಾಮುಂಡೇಶ್ವರಿ ದೇವಿ(Chamundeshwari) ಆಷಾಡ ಮಾಸದ ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿ ಒಡತಿಯಾಗಿದ್ದಾಳೆ.
ಆಷಾಢ ಮಾಸದ ಒಂದೇ ತಿಂಗಳಲ್ಲಿ ಚಾಮುಂಡೇಶ್ವರಿ(Chamundeshwari) ದೇವಾಲಯಕ್ಕೆ ದಾಖಲೆಯ ಆದಾಯ ಒಲಿದು ಬಂದಿದೆ. ಇತಿಹಾಸದಲ್ಲಿಯೇ ಇದು ಒಂದೇ ತಿಂಗಳಲ್ಲಿ ಅತಿ ಹೆಚ್ಚಿನ ಆದಾಯ ಶೇಖರಣೆಯಾಗಿದೆ.
ಇಂದೇ ತಿಂಗಳಲ್ಲಿ ಬರೋಬ್ಬರಿ 2 ಕೋಟಿ 33 ಲಕ್ಷದ 51 ಸಾವಿರದ 270 ರೂ. ಹಣ ಹುಂಡಿ ಕಾಣಿಕೆಗೆ ಸಂದಾಯವಾಗಿದೆ. 270 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂದಾಯವಾಗಿದೆ. ಮತ್ತು 1 ಕೋಟಿ 3 ಲಕ್ಷದ 69 ಸಾವಿರದ 270 ರೂ ಪ್ರವೇಶದ ಟಿಕೆಟ್ ನಿಂದ ಆದಾಯ ಬಂದಿದೆ. ಆ ಮೂಲಕ ಹಿಂದಿನ ಎಲ್ಲಾ ದಾಖಲೆಯನ್ನು ಈ ಬಾರಿಯ ಆಷಾಡ ಮಾಸದ ಆದಾಯ ಮೀರಿಸಿದೆ. ಇದನ್ನೂ ಓದಿ : ಮೇಕೆದಾಟು ಯೋಜನೆ : ಇಂದು ಸುಪ್ರೀಂಕೋರ್ಟ್ನಲ್ಲಿ ತಮಿಳುನಾಡು ಅರ್ಜಿ ವಿಚಾರಣೆ
ಚಾಮುಂಡಿಬೆಟ್ಟದ ದೇವಾಲಯದಲ್ಲಿ 250 ಮಂದಿಯಿಂದ ದಿನವಿಡೀ ಹುಂಡಿ ಎಣಿಕೆ ಕಾರ್ಯ ನಡೆದಿದೆ. ವಿದೇಶಿಯರೂ ಹುಂಡಿ ಕಾಣಿಕೆ ಸಲ್ಲಿಸಿದ್ದಾರೆ. 500, 1000 ಮುಖ ಬೆಲೆಯ ಒಂದು ಲಕ್ಷಕ್ಕೂ ಅಧಿಕ ಬೆಲೆಯ ರದ್ದಾದ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿವೆ.
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. ಹುಂಡಿ ಕಾಣಿಕೆ ಹಣವನ್ನು ಚಾಮುಂಡಿಬೆಟ್ಟದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ಸಂದಾಯ ಮಾಡಲಾಗಿದೆ.