ಮೇಕೆದಾಟು ಯೋಜನೆ(Mekedatu Project) ಸಂಬಂಧ ಇಂದು ಸುಪ್ರೀಂಕೋರ್ಟ್(Suprim Court)ನಲ್ಲಿ ತಮಿಳುನಾಡು ಸರ್ಕಾರ (Tamilunadu Govt) ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿದೆ.
ಮೇಕೆದಾಟು ಯೋಜನೆ(Mekedatu Project) ಗೆ ಅವಕಾಶ ಕೊಡಬಾರದು ಎಂದು ತಮಿಳುನಾಡು ಸರ್ಕಾರ(Tamilunadu Govt) ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಇಂದು ಮಹತ್ತರ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ : ಭಾರತದಲ್ಲಿ 5 ಜಿ ಯುಗಾರಂಭ : ಇಂದಿನಿಂದ ಸ್ಪೆಕ್ಟ್ರಂ ಹರಾಜು
ಮೇಕೆದಾಟು ಯೋಜನೆ ಬಗ್ಗೆ ನಿರ್ಣಯ ಕೈಗೊಳ್ಳುವ ಅಧಿಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಇಲ್ಲ. ಕೇವಲ ನೀರು ಹಂಚಿಕೆಯಷ್ಟೇ ಪ್ರಾಧಿಕಾರದ ಕೆಲಸ. ಹೀಗಾಗಿ ಕರ್ನಾಟಕಕ್ಕೆ ಯೋಜನೆಗೆ ಅವಕಾಶ ನೀಡಬೇಡಿ ಎಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ತುರ್ತು ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಇಂದು ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಯಲಿದೆ.