ಲೋಕಸಭೆಯಿಂದ ಉಚ್ಚಾಟನೆಗೊಂಡ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಗೊಂಡಿದೆ.
ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದಲ್ಲಿ ಸಂಸದೆ ಸ್ಥಾನದಿಂದ ಉಚ್ಚಾಟಿತರಾಗಿರುವ ಟಿಎಂಸಿಯ ಮಹುವಾ ಮೋಯಿತ್ರಾ, ಮೇಲ್ಮನವಿ ಅರ್ಜಿವಿಚಾರಣೆ ಮತ್ತೆ 2024ರ ಜನವರಿ 3ಕ್ಕೆ ನಡೆಯಲಿದೆ.
ಇನ್ನು ಮೇಲ್ಮನವಿ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲನೆ ಮಾಡಲು ಸಮಯಾವಕಾಶ ಬೇಕಿದೆ ಅಂತ ಜಸ್ಟೀಸ್ ಸಂಜೀವ ಖನ್ನಾ ನ್ಯಾಯ ಪೀಠ ಸ್ಪಷ್ಟನೆ ನೀಡಿದೆ.