ಸಿದ್ದರಾಮಯ್ಯರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ – ಆರೋಪಿಯ ಬಂಧನ

Siddaramaiah

ಕೊಡಗಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ( Siddaramaiah ) ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಮತ್ತೊಂದು ತಿರುವು ದೊರಕಿದೆ. ಮೊಟ್ಟೆ ಎಸೆದಿದ್ದ ಆರೋಪಿ ಸಂಪತ್​ನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆರೋಪಿ ಕಾಂಗ್ರೆಸ್​​ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ.

ಕೋರ್ಟ್​​ಗೆ ಶರಣಾಗಲು ಬಂದಾಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಸಂಪತ್ ತಾನು ಕಾಂಗ್ರೆಸ್​​ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ : ಸಿದ್ದರಾಮಯ್ಯ ರಾಷ್ಟ್ರರಾಜಕಾರಕ್ಕೆ ಹೋಗಲಿ – ಜೆಡಿಎಸ್​ ಶಾಸಕ ಸಾರಾ ಮಹೇಶ್

ಅಲ್ಲದೇ, ಸಿದ್ದರಾಮಯ್ಯ ( Siddaramaiah ) ನವರ ಕಾರಿಗೆ ಮೊಟ್ಟೆ ಎಸೆದಿದ್ದು ನಾನೇ. ಸಿದ್ದರಾಮಯ್ಯನವರ ಕೆಲವು ಹೇಳಿಕೆಗಳಿಂದ ಬೇಸತ್ತು ಹೀಗೆ ಮಾಡಿದ್ದೇನೆ ಎಂದಿದ್ದಾನೆ.

ಸಿದ್ದರಾಮಯ್ಯ ( Siddaramaiah ) ದನದ ಮಾಂಸ ಭಕ್ಷಣೆ ಮಾಡುತ್ತೇನೆ ಎಂದಿದ್ರು. ಟಿಪ್ಪು ವಿಷಯದಲ್ಲಿ ಕೊಡಗಿನ ಜನರ ಭಾವನೆಗೆ ಧಕ್ಕೆ ತಂದಿದ್ದರು. ಸಿದ್ದರಾಮಯ್ಯನವರ ಈ ನಡೆ ನನಗೆ ಇಷ್ಟವಾಗಲಿಲ್ಲ. ಆದ್ದರಿಂದ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದೇನೆ ಎಂದು ಆರೋಪಿ ಸಂಪತ್ ಹೇಳಿದ್ದಾನೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here