ಸಿದ್ದರಾಮಯ್ಯ ರಾಷ್ಟ್ರರಾಜಕಾರಕ್ಕೆ ಹೋಗಲಿ – ಜೆಡಿಎಸ್​ ಶಾಸಕ ಸಾರಾ ಮಹೇಶ್

Siddaramaiah

ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah)ನವರು ರಾಷ್ಟ್ರರಾಜಕಾರಣದತ್ತ ಯೋಚನೆ ಮಾಡಬೇಕು. ರಾಜ್ಯ ರಾಜಕಾರಣವನ್ನು ತಮ್ಮ ಕಿರಿಯರಿಗೆ ಬಿಟ್ಟು ಕೊಡಬೇಕು ಎಂದು ಜೆಡಿಎಸ್ ನಾಯಕ ಸಾರಾ ಮಹೇಶ್ ಹೇಳಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ(Siddaramaiah)ನವರು ದೇಶದಲ್ಲಿ ಪಕ್ಷ ಕಟ್ಟಲಿ. ಒಂದು ಬಾರಿ ಸಿದ್ದರಾಮಯ್ಯ ಸಿಎಂ ಆಗಿರೋದು ಸಾಕು. ಮತ್ತೆ ಆಗುವುದೇನೂ ಬೇಡ. ಅವರು ತಮ್ಮ ಕಿರಿಯರಿಗೆ ಸಿಎಂ ಪಟ್ಟ ಹಾಗೂ ರಾಜ್ಯ ರಾಜಕಾರಣ ಬಿಟ್ಟು ಕೊಡಲಿ.

ಇದನ್ನೂ ಓದಿ : GST: ಮನೆ ಬಾಡಿಗೆಗೂ ಜಿಎಸ್​​ಟಿ..! 

ಕಳೆದ ಚುನಾವಣೆಯಲ್ಲೇ ಸಿದ್ದರಾಮಯ್ಯ ಕೊನೆಯ ಚುನಾವಣೆ ಅಂದಿದ್ದರು. ಈಗ ಮತ್ತೆ ಇದೇ ಕೊನೆ ಚುನಾವಣೆ ಅಂತಿದ್ದಾರೆ. ಸಿದ್ದರಾಮಯ್ಯ ಅವರಂಥವರು ಸಕ್ರಿಯ ರಾಜಕಾರಣದಲ್ಲಿ ಇರಬೇಕು.  ರಾಜ್ಯಕ್ಕಿಂತಾ ದೇಶಕ್ಕೆ ಸಿದ್ದರಾಮಯ್ಯ ಅವಶ್ಯಕತೆ ಕಾಣುತ್ತಿದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಸಾರಾ ಮಹೇಶ್ ಹೇಳಿದ್ದಾರೆ.

(ನಟ ಗಣೇಶ್, ದಿಗಂತ್, ಪವನ್​ಕುಮಾರ್ ನಟನೆಯ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಪ್ರೇಕ್ಷಕರ ವಿಮರ್ಶೆ)

LEAVE A REPLY

Please enter your comment!
Please enter your name here