ಹೊಸ ವರ್ಷದಿಂದಲೇ ಅಂದರೆ ಜನವರಿಯಿಂದಲೇ ಕಾರುಗಳ ಬೆಲೆ ಇನ್ನಷ್ಟು ದುಬಾರಿ ಆಗಲಿದೆ.
ಜನವರಿಯಲ್ಲಿ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಪ್ರಮುಖ ಕಾರು ಉತ್ಪಾದಕಾ ಕಂಪನಿ ಮಾರುತಿ ಸುಜುಕಿ ಮುಂಬೈ ಷೇರು ಮಾರುಕಟ್ಟೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ಹೇಳಿದೆ.
ಆದರೆ ಕಾರುಗಳ ಬೆಲೆಯನ್ನು ಎಷ್ಟು ಪ್ರಮಾಣದಲ್ಲಿ ಏರಿಸಲಾಗುತ್ತದೆ ಎಂಬ ಮಾಹಿತಿಯನ್ನು ಕೊಟ್ಟಿಲ್ಲ.
ಹಣದುಬ್ಬರ ಮತ್ತು ಸರಕುಗಳ ದರ ಏರಿಕೆ ಹಿನ್ನೆಲೆಯಲ್ಲಿ ಕಾರುಗಳ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದು ಮಾರುತಿ ಸುಜುಕಿ ಹೇಳಿದೆ.
೩ ಲಕ್ಷದ ೨೪ ರೂಪಾಯಿ ಮೌಲ್ಯದ ಕಾರಿನಿಂದ ೨೮ ಲಕ್ಷದ ೪೨ ಸಾವಿರ ರೂಪಾಯಿ ಮೊತ್ತದವರೆಗಿನ ಕಾರುಗಳನ್ನು ಮಾರುತಿ ಸುಜುಕಿ ಮಾರಾಟ ಮಾಡುತ್ತಿದೆ.
ಈ ವರ್ಷದಲ್ಲೇ ಎರಡು ಬಾರಿ ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿದೆ. ಜನವರಿಯಲ್ಲಿ ಶೇಕಡಾ ೧.೧ರಷ್ಟು ಮತ್ತು ಏಪ್ರಿಲ್ನಲ್ಲೂ ದರ ಹೆಚ್ಚಳ ಮಾಡಿತ್ತು.
ADVERTISEMENT
ADVERTISEMENT