ಚುನಾವಣೆಯಲ್ಲಿ ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡ್ಬೇಕಾಗಿಲ್ಲ ಎಂಬ ಹೇಳಿಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರನ್ನು ಇನ್ನಷ್ಟು ಮುಜುಗರಕ್ಕೆ ದೂಡಿದೆ.
ಇತ್ತ ಸಿ ಟಿ ರವಿ ವಿರುದ್ಧ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಬಿಜೆಪಿ ಅಧಿಕಾರಕ್ಕೆ ತಂದಿದ್ದೇ ವೀರಶೈವ ಲಿಂಗಾಯತರು ನೆನೆಪಿರಲಿ ಸಿ ಟಿ ರವಿ ಎಂದು ಎಚ್ಚರಿಕೆ ನೀಡಿದೆ.
ವೀರಶೈವ ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡ್ಬೇಕಿಲ್ಲ ಅನ್ನುವ ಪತ್ರಿಕೆ ಹೇಳಿಕೆ ವಿರುದ್ಧವಾಗಿ ಕರ್ನಾಟಕ ರಾಜ್ಯದಲ್ಲಿ ಸಿ ಟಿ ರವಿ ಚುನಾವಣೆ ಪ್ರಚಾರದಲ್ಲಿ ಕಂಡುಬಂದರೆ ಮುತ್ತಿಗೆ ಹಾಕುವುದು ಅಷ್ಟೇ ಅಲ್ಲ, ಕಿತ್ತೋದ ಸಿ ಟಿ ರವಿ ಎಂದು ಘೋಷಣೆ ಕೂಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕಳೆದ 50 ವರ್ಷಗಳಿಂದ ಸಿ ಟಿ ರವಿ ಅಂತಹವರು ತುಂಬಾ ಜನಗಳನ್ನು ವೀರಶೈವ ಲಿಂಗಾಯತ ಸಮಾಜ ನೋಡಿದೆ. ನಮ್ಮ ಸಮಾಜ ಎಷ್ಟೇ ಒಡೆದದೂ ಒಂದಾಗಿ ಚುನಾವಣೆಯಲ್ಲಿ ಪಾಠ ಕಲಿಸಿರುವುದು ಗೊತ್ತಿಲ್ಲವೇ..?
ಸಿಟಿ ರವಿ ಅಂತಹವರನ್ನು ಪಕ್ಷದಿಂದ ಉಚ್ಛಾಟನೆ ಮಾಡ್ಬೇಕು. ವೀರಶೈವ ಲಿಂಗಾಯತ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲವಾದ್ರೆ ಒಂದು ವಾರದಲ್ಲಿ ನಿಮ್ಮ ಮನೆಗೆ ಬಂದು ಹೋರಾಟ ಮಾಡ್ತೇವೆ
ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಎಚ್ಚರಿಕೆ ನೀಡಿದೆ.