BREAKING: ಭೂಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್​ ಪತನ

ಭಾರತೀಯ ಭೂಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್​ ಪತನಗೊಂಡಿದೆ.

ಈಶಾನ್ಯ ರಾಜ್ಯ ಅರುಣಾಚಲಪ್ರದೇಶದ ಪೂರ್ವ ಕೆಮಂಗ್​ ಜಿಲ್ಲೆಯಲ್ಲಿ ಹೆಲಿಕಾಪ್ಟರ್​ ಪತನವಾಗಿದೆ.

ಹೆಲಿಕಾಪ್ಟರ್​ನಲ್ಲಿ ಲೆಫ್ಟಿನೆಂಟ್​ ಕರ್ನಲ್​ ಮತ್ತು ಮೇಜರ್​ ದರ್ಜೆ ಇಬ್ಬರು ಪೈಲಟ್​ಗಳಿದ್ದರು. ಇಬ್ಬರೂ ಪೈಲಟ್​ಗಳ ಪತ್ತೆಗಾಗಿ ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿದೆ.

ಪೂರ್ವ ಕೆಮಂಗ್​ ಜಿಲ್ಲೆಯ ಸಂಗೆ ಗ್ರಾಮದಿಂದ ಅಸ್ಸಾಂ ರಾಜ್ಯದ ಸೊಂಟಿಪುರ್​​ಗೆ ಹೆಲಿಕಾಪ್ಟರ್​ ಬೆಳಗ್ಗೆ 9 ಗಂಟೆಗೆ ಟೇಕಾಫ್​ ಆಗಿತ್ತು.

ಆದರೆ ಟೇಕಾಫ್​ ಆದ 15 ನಿಮಿಷದಲ್ಲೇ ಹೆಲಿಕಾಪ್ಟರ್​ ಸಂಪರ್ಕ ಕಳೆದುಕೊಂಡಿತು.

ದಿರಾಂಗ್​ ಗ್ರಾಮದಲ್ಲಿ ಹೆಲಿಕಾಪ್ಟರ್​ ಹೊತ್ತಿ ಊರಿಯುತ್ತಿದಿದ್ದನ್ನು ಗ್ರಾಮಸ್ಥರು ನೋಡಿದ್ದಾರೆ. ಮಧ್ಯಾಹ್ನ 12.30ರ ಬಗ್ಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ.

ಗ್ರಾಮದಲ್ಲಿ ಮೊಬೈಲ್​ ಸಂಪರ್ಕ ಇಲ್ಲದೇ ಇರುವುದು ಮತ್ತು ದಟ್ಟ ಮಂಜಿನ ಕಾರಣ ಕಾರ್ಯಾಚರಣೆ ದುಸ್ತರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here