ತಾಯಿಯಾದ ಸಂಭ್ರಮದಲ್ಲಿ ಬಾಲಿವುಡ್ ನಟಿ ಬಿಪಾಶಾ ಬಸು

ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಇಂದು (ನವೆಂಬರ್ 12) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಇದೀಗ ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.

ಬಿಪಾಶಾ ಮತ್ತು ಕರಣ್ ಸಿಂಗ್ ಇಬ್ಬರೂ 2016ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. 6 ವರ್ಷಗಳ ಬಳಿಕ ಬಿಪಾಶಾ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಬಿಪಾಶಾ ದಂಪತಿ ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಬಿಪಾಶಾ  ಮತ್ತು ಕರಣ್ ಸಿಂಗ್ ತಂದೆ-ತಾಯಿ ಆಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದರು. ಬಳಿಕ ಗರ್ಭಿಣಿ ಬಿಪಾಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತರಹೇವಾರಿ ಫೋಟೋಶೂಟ್ ಮಾಡಿದ್ದರು. ಬಿಪಾಶಾ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಕೆಲವೊಮ್ಮೆ ಬಿಪಾಶಾ ಫೋಟೋಗಳು ನೆಟ್ಟಿಗರ ಕೋಪಕ್ಕೂ ಕಾರಣವಾಗಿತ್ತು. ಗರ್ಭಿಣಿಯಾದಾಗ ಹಾಟ್ ಆಗಿ ಕಾಣಿಸಿಕೊಳ್ಳಬೇಕಾ ಎಂದು ನೆಟ್ಟಿಗರು ಕಿಡಿಕಾರಿದ್ದರು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬಿಪಾಶಾ ದಂಪತಿ ಸಿಕ್ಕಾಪಟ್ಟೆ ಫೋಟೋ ಶೂಟ್ ಮಾಡಿದ್ದರು.