ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮತ್ತು ಸೊಸೆಯ ಬಗ್ಗೆ ಅಶ್ಲೀಲವಾಗಿ ಮತ್ತು ಅಸಭ್ಯವಾಗಿ ಟ್ವೀಟಿಸಿದ್ದ ಬಿಜೆಪಿ ಕಾರ್ಯಕರ್ತೆಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಮಕೂರು ಮೂಲದ ಬಿಜೆಪಿ ಶಕುಂತಲ ಎಸ್ ಅವರನ್ನು ಹೈಗ್ರೌಂಡ್ಸ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ನೇತ್ರಾಜ್ಯೋತಿ ಕಾಲೇಜಿನಲ್ಲಾದ ವೀಡಿಯೋ ಪ್ರಕರಣ ಉಲ್ಲೇಖಿಸಿ ಸಿದ್ದರಾಮಯ್ಯ ಅವರ ಪತ್ನಿ ಮತ್ತು ಸೊಸೆಯ ಬಗ್ಗೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಸ್ ಅವಹೇಳನಕಾರಿಯಾಗಿ ಟ್ವೀಟಿಸಿದ್ದರು.
ಇವರ ಟ್ವೀಟ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಹನುಮಂತರಾಯ ಅವರು ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದರು.
ADVERTISEMENT
ADVERTISEMENT