ಬೆಂಗಳೂರಲ್ಲಿ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸುವ ಸಲುವಾಗಿ ನಗರ ಪೊಲೀಸ್ ಆಯುಕ್ತ ದಯಾನಂದ ಬಿ ಮತ್ತೊಂದು ಹೆಜ್ಜೆಯಿಟ್ಟಿದ್ದಾರೆ.
ಗಸ್ತು ತಿರುಗುವ ಪೊಲೀಸರು ಇನ್ಮುಂದೆ ಬಾಡಿ ಕ್ಯಾಮರಾ ಧರಿಸುವುದು ಕಡ್ಡಾಯ. ಗಸ್ತು ಪೊಲೀಸರು ಸಾರ್ವಜನಿಕರ ಜೊತೆಗೆ ವ್ಯವಹರಿಸುವ ಪ್ರತಿಕ್ಷಣವೂ ಈ ಬಾಡಿ ಕ್ಯಾಮರಾ ಮೂಲಕ ರೆಕಾರ್ಡ್ ಆಗಲಿದೆ ಮತ್ತು ಆ ವೀಡಿಯೋವನ್ನು ದಾಖಲೆಯಾಗಿ ಪರಿಗಣಿಸಲಾಗುತ್ತದೆ.
ಸಾರ್ವಜನಿಕರು ಈ ನಿರ್ಧಾರವನ್ನು ಪ್ರಶಂಸಿಸುವುದುದಾದರೆ ಗಸ್ತು ಪೊಲೀಸರ ಜೊತೆಗೆ ಸೆಲ್ಫಿ ತೆಗೆದು ಪೋಸ್ಟ್ ಮಾಡಿ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಬಿ ಅವರು ಟ್ವೀಟಿಸಿದ್ದಾರೆ.
ಮೊದಲ ಹೆಜ್ಜೆಯಾಗಿ ನಗರ ಪೊಲೀಸ್ ಆಯುಕ್ತರು ವಾಟ್ಸಾಪ್ ಸಂಖ್ಯೆ 94808 01000ಗೆ ನೇರವಾಗಿ ಸಾರ್ವಜನಿಕರು ದೂರು ನೀಡುವ ಕ್ರಮವನ್ನು ನಗರದಲ್ಲಿ ಜಾರಿಗೆ ತಂದಿದ್ದರು.
ADVERTISEMENT
ADVERTISEMENT