ಮತ ವಿಭಜನೆ ಲಾಭ – ತ್ರಿಪುರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ

ಸತತ ಎರಡನೇ ಬಾರಿಗೆ ತ್ರಿಪುರದಲ್ಲಿ ಬಿಜೆಪಿಗೆ ಅಧಿಕಾರಕ್ಕೇರಿದೆ. ತ್ರಿಪುರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ ಬಿಜೆಪಿ 33 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

60 ಶಾಸಕರ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಬೇಕಿರುವುದು 31 ಶಾಸಕರ ಬೆಂಬಲ.

ಬಿಜೆಪಿ 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಮಿತ್ರ ಪಕ್ಷ ಐಪಿಎಫ್​ಟಿ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್​ ಮತ್ತು ಎಡಪಕ್ಷಗಳ ಚುನಾವಣಾಪೂರ್ವ ಮೈತ್ರಿ ಫಲ ಕೊಟ್ಟಿಲ್ಲ. ಎಡಪಕ್ಷಗಳು ಕೇವಲ 9 ಮತ್ತು ಕಾಂಗ್ರೆಸ್​ ಕೇವಲ 5ರಲ್ಲಿ ಮುನ್ನಡೆ ಸಾಧಿಸಿದೆ.

ತ್ರಿಪುರ ರಾಜ್ಯದ ರಾಜವಂಶಸ್ಥ ಪ್ರದ್ಯೋತ್​ ದೆಬ್​ ನೇತೃತ್ವದ ತ್ರಿಪುರ ಆದಿವಾಸಿಗಳ ಪ್ರಗತಿಪರ ಒಕ್ಕೂಟ 11ರಲ್ಲಿ ಮುನ್ನಡೆ ಸಾಧಿಸಿದೆ.

ಎಡಪಕ್ಷಗಳು+ಕಾಂಗ್ರೆಸ್​ ಮೈತ್ರಿಕೂಟ ಹಾಗೂ ಹೊಸದಾಗಿ ರಚನೆ ಆಗಿರುವ ತಿಪ್ರಾ (TIPRA) ಆಡಳಿತ ವಿರೋಧಿ ಮತಗಳನ್ನು ವಿಭಜನೆ ಮಾಡಿದ್ದು ಬಿಜೆಪಿಗೆ ಅನುಕೂಲವಾಗಿದೆ. 

ಚುನಾವಣಾ ಆಯೋಗದ ಅಂಕಿಅಂಶ ಪ್ರಕಾರ ಬಿಜೆಪಿ ಶೇಕಡಾ 40ರಷ್ಟು ಮತಗಳನ್ನು ಗಳಿಸಿದೆ. ಸಿಪಿಐಎಂ ಮತ್ತು ಕಾಂಗ್ರೆಸ್​ ಮೈತ್ರಿಕೂಟ ಶೇಕಡಾ 34 ಮತ್ತು ತಿಪ್ರಾ ಪಕ್ಷ ಶೇಕಡಾ 20ರಷ್ಟು ಮತಗಳನ್ನು ಪಡೆದಿವೆ.

LEAVE A REPLY

Please enter your comment!
Please enter your name here