ADVERTISEMENT
ಎರಡು ಬಾರಿ ಲೋಕಸಭಾ ಸಂಸದರಾಗಿದ್ದ ಮತ್ತು ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ (Maharastra BJP) ಕಿರಿಟ್ ಸೋಮಯ್ಯ (Kirit Somaiya) ಅವರ ಖಾಸಗಿ ವೀಡಿಯೋವೊಂದು ಬಹಿರಂಗವಾಗಿದೆ.
ಬೇರೆ ಮಹಿಳೆಯೊಂದಿಗೆ ಖಾಸಗಿಯಾಗಿ ಅನಪೇಕ್ಷಿತ ರೀತಿಯಲ್ಲಿ ಬಿಜೆಪಿ ನಾಯಕ ಇರುವ ವೀಡಿಯೋವನ್ನು ಮರಾಠಿ ವಾಹಿನಿ ಲೋಕಶಾಹಿ ಪ್ರಸಾರ ಮಾಡಿದೆ.
ಕಿರಿಟ್ ಸೋಮಯ್ಯ (Kirit Somaiya Video) ಅವರ ಖಾಸಗಿ ವೀಡಿಯೋ ಬಹಿರಂಗ ಮಹಾರಾಷ್ಟ್ರದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿದೆ.
ಸೋಮಯ್ಯ ಅವರು ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಸರ್ಕಾರ ರಚನೆಗೆ ಸೇರಿಕೊಂಡಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ (CM Eknath Shinde) ಬಣದಲ್ಲಿರುವ ಶಿವಸೇನೆ ನಾಯಕರು ಮತ್ತು ಅಜಿತ್ ಪವಾರ್ (Ajit Pawar) ಅವರ ಜೊತೆಗೆ ಗುರುತಿಸಿಕೊಂಡಿರುವ ಎನ್ಸಿಪಿ ನಾಯಕರ ಭ್ರಷ್ಟಾಚಾರದ ವಿರುದ್ಧ ಈ ಹಿಂದೆ ಸ್ಫೋಟಕ ದಾಖಲೆಗಳನ್ನು ಬಿಡುಗಡೆ ಮಾಡಿದ್ದಲ್ಲದೇ, ಜಾರಿ ನಿರ್ದೇಶನಾಲಯದಿಂದ ತನಿಖೆಗೂ ಕಾರಣವಾಗಿದ್ದರು.
ಅಜಿತ್ ಪವಾರ್ ಬಣ ಬಿಜೆಪಿ ಸರ್ಕಾರದ ಭಾಗವಾದ ಕೆಲವೇ ದಿನಗಳಲ್ಲಿ ಕಿರಿಟ್ ಸೋಮಯ್ಯ ಖಾಸಗಿ ವೀಡಿಯೋ ಬಹಿರಂಗವಾ್ಗಿದೆ.
ಕಿರಿಟ್ ಸೋಮಯ್ಯ ಅವರ ಬಳಿಕ ಹಲವು ರಾಜಕಾರಣಿಗಳ ಸಂಪತ್ತಿನ ಕುರಿತಾದ ಮಹತ್ವದ ದಾಖಲೆಗಳೂ ಇರುವ ಹಿನ್ನೆಲೆಯಲ್ಲಿ ಸಿಡಿ ಬಹಿರಂಗ ಮತ್ತಷ್ಟು ಮಹತ್ವ ಪಡೆದಿದೆ.
ಮಹಾರಾಷ್ಟ್ರ ವಿಧಾನಸಭೆಯ ಅಧಿವೇಶನ ಆರಂಭದ ಹೊತ್ತಲ್ಲೇ ಸಿಡಿ ಬಹಿರಂಗಪಡಿಸಿದ್ದರ ಹಿಂದೆ ಪಿತೂರಿ ಇದೆ ಎಂದು ಕಿರಿಟ್ ಸೋಮಯ್ಯ ಆರೋಪಿಸಿದ್ದಾರೆ.
ADVERTISEMENT