4 ತಿಂಗಳಲ್ಲಿ ಬಿಜೆಪಿ ಸರ್ಕಾರದಿಂದ ಪತ್ರಿಕೆ, TVಗಳಿಗೆ 44 ಕೋಟಿ ರೂ. ಜಾಹೀರಾತು..!

ಚುನಾವಣೆಯಲ್ಲಿ ಸೋತಿರುವ ಬಿಜೆಪಿ ತಾನು ಅಧಿಕಾರದಲ್ಲಿದ್ದಾಗ (ಚುನಾವಣೆ ಘೋಷಣೆ ಆಗುವವರೆಗೆ) ಕೇವಲ ನಾಲ್ಕು ತಿಂಗಳಲ್ಲಿ ಪ್ರಚಾರಕ್ಕಾಗಿ 44 ಕೋಟಿ ರೂಪಾಯಿಯನ್ನು ಖರ್ಚು ಮಾಡಿದೆ.

ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಕಳೆದ ವರ್ಷದ ಡಿಸೆಂಬರ್​ 1ರಿಂದ ಇದೇ ಮಾರ್ಚ್​ 29ರವರೆಗೆ ಬರೋಬ್ಬರೀ 44 ಕೋಟಿ 42 ಲಕ್ಷ ರೂಪಾಯಿ ಸುರಿಯಲಾಗಿದೆ.

ಮುದ್ರಣ ಮಾಧ್ಯಮಗಳಲ್ಲಿ ಅಂದರೆ ಪತ್ರಿಕೆಗಳಲ್ಲಿ ಬಿಜೆಪಿ ಸರ್ಕಾರದ ಪರ ಪ್ರಚಾರಕ್ಕಾಗಿ 4 ತಿಂಗಳಲ್ಲಿ 27 ಕೋಟಿ 46 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.

ಟಿವಿಗಳಲ್ಲಿ ಪ್ರಚಾರಕ್ಕಾಗಿ ಕೇವಲ 4 ತಿಂಗಳಿಗೆ 16 ಕೋಟಿ 96 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ರಾಜೇಶ್​ ಕೃಷ್ಣ ಪ್ರಸಾದ್​ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ.

ಈ ಆರ್​ಟಿಐ ಮಾಹಿತಿಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್​ ಶಿವರಾಂ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.