BIG BREAKING: ಪದ್ಮರಾಜ್​ ರಾಮಯ್ಯ ಅವರಿಗೆ ಮಂಗಳೂರು ದಕ್ಷಿಣ ಕಾಂಗ್ರೆಸ್​ ಟಿಕೆಟ್​ ಅಂತಿಮ

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಿದೆ. ಮಾರ್ಚ್​ 17ರಂದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಿದೆ.

ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಪದ್ಮರಾಜ್​ ರಾಮಯ್ಯ ಅವರಿಗೆ ಕಾಂಗ್ರೆಸ್​ ಟಿಕೆಟ್​ ನೀಡುವುದಕ್ಕೆ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ಷಣ ವೆಬ್​ಸೈಟ್​​ಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್​ ಪ್ರಯೋಗಕ್ಕೆ ಮುಂದಾಗಿದೆ.

ಯಾರು ಪದ್ಮರಾಜ್​ ರಾಮಯ್ಯ..?

ಪದ್ಮರಾಜ ರಾಮಯ್ಯ ಅವರು ಮಾಜಿ ಕೇಂದ್ರ ಸಚಿವ, ಬಿಲ್ಲವ ಸಮುದಾಯದ ನಾಯಕ ಜನಾರ್ದನ ಪೂಜಾರಿ ಅವರ ಆಪ್ತ ಶಿಷ್ಯ. ಪ್ರಸಿದ್ಧ ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ. ವೃತ್ತಿಯಲ್ಲಿ ವಕೀಲರು ಆಗಿರುವ ಪದ್ಮರಾಜ್​ ಅವರು ಗುರು ಬೆಳದಿಂಗಳು ಎಂಬ ಸಂಸ್ಥೆ ಮೂಲಕವೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿಲ್ಲ:

ಅಂದಹಾಗೆ ಪದ್ಮರಾಜ ರಾಮಯ್ಯ ಅವರು ಕಾಂಗ್ರೆಸ್​ ಟಿಕೆಟ್​​ಗಾಗಿ ಅರ್ಜಿ ಸಲ್ಲಿಸಿಲ್ಲ. ಮಾಜಿ ಶಾಸಕ ಜೆ ಆರ್​ ಲೋಬೋ ಮತ್ತು ಮಾಜಿ ಎಂಎಲ್​ಸಿ ಐವಾನ್​ ಡಿಸೋಜಾ ಈ ಕ್ಷೇತ್ರದಲ್ಲಿ ಟಿಕೆಟ್​ ಆಕಾಂಕ್ಷಿತರು.

ಪದ್ಮರಾಜ್​ ರಾಮಯ್ಯ ಅವರಿಗೆ ಟಿಕೆಟ್​ ಹಿಂದಿನ ಲೆಕ್ಕಾಚಾರ:

ಮಾಹಿತಿಗಳ ಪ್ರಕಾರ ಈ ಬಾರಿ ಪದ್ಮರಾಜ ರಾಮಯ್ಯ ಅವರಿಗೆ ಟಿಕೆಟ್ ಕೊಡುವ ತೀರ್ಮಾನದ ಹಿಂದೆ ಜಾತಿ ಸಮೀಕರಣ ಹೊಸ ಲೆಕ್ಕಾಚಾರವನ್ನು ಕಾಂಗ್ರೆಸ್​ ಹೆಣೆದಿದೆ.

ಪದ್ಮರಾಜ್​ ಅವರು ಬಿಲ್ಲವ ಸಮುದಾಯದ ನಾಯಕ. ಬಿಲ್ಲವರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡವರು.

ಈ ಕ್ಷೇತ್ರದಲ್ಲಿ ಬಿಲ್ಲವ, ಕ್ರೈಸ್ತ, ಮುಸಲ್ಮಾನ ಮತ್ತು ಕೊಂಕಣಿ ಸಮುದಾಯದವರ ಮತಗಳು ಅಧಿಕ ಇವೆ.

ಈ ಬಾರಿ ಕ್ರಿಶ್ಚಿಯನ್​ ಮತ್ತು ಮುಸಲ್ಮಾನ ಸಮುದಾಯದವರೂ ಪದ್ಮರಾಜ್​ ಅವರಿಗೆ ಟಿಕೆಟ್​ ಕೊಟ್ಟರೆ ಒಳ್ಳೆದು ಎಂಬ ಅಭಿಪ್ರಾಯದಲ್ಲಿದ್ದಾರೆ ಎನ್ನುವುದು ಮಾಹಿತಿ.

ಈ ಹಿಂದೆ ಈ ಕ್ಷೇತ್ರದಲ್ಲಿ ಕ್ರಿಶ್ಚಿಯನ್​ ಸಮುದಾಯದ ಜೆ ಆರ್​ ಲೋಬೋಗೆ ಕಾಂಗ್ರೆಸ್​ ಟಿಕೆಟ್​ ನೀಡಿತ್ತು.

ಹೊಸ ಬಿಲ್ಲವ ನಾಯಕನಿಗೆ ಟಿಕೆಟ್​ ಕೊಡುವ ಮೂಲಕ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಲ್ಲವ ಮತಗಳನ್ನು ಸೆಳೆಯಲು ಸಹಕಾರಿ ಆಗಬಹುದು ಎನ್ನುವುದು ಕಾಂಗ್ರೆಸ್​ನ ಲೆಕ್ಕಾಚಾರ.

LEAVE A REPLY

Please enter your comment!
Please enter your name here