ಹೈನು ವಿಜ್ಞಾನ (Dairy Technology) ವಿದ್ಯಾರ್ಥಿಗಳ ಪ್ರತಿಭಟನೆ – ಆ ಬೇಡಿಕೆ ಈಡೇರಿಸುತ್ತಾ ಸರ್ಕಾರ..?

ಹೈನು ವಿಸ್ತರಣಾಧಿಕಾರಿ ಹುದ್ದೆಯನ್ನು ಸೃಷ್ಟಿಸುವಂತೆ ಆಗ್ರಹಿಸಿ ಬೆಂಗಳೂರಲ್ಲಿರುವ ಹೈನು ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೇಡಿಕೆ ಏನು..?

ಪಶುಸಂಗೋಪನಾ ಇಲಾಖೆಯಲ್ಲಿ  ಹೈನು ವಿಸ್ತರಣಾಧಿಕಾರಿ ಹುದ್ದೆಯನ್ನು (DEO – Dairy Extension Officer) ಸೃಷ್ಟಿಸಬೇಕು ಮತ್ತು ಆ ಮೂಲಕ ಹೈನು ವಿಜ್ಞಾನ ಶಿಕ್ಷಣವನ್ನು ಪಡೆಯುತ್ತಿರುವ ತಮಗೆ ಸರ್ಕಾರಿ ನೌಕರಿ ಹೊಂದಲು ಅವಕಾಶ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಮೂರ್ನಾಲ್ಕು ವರ್ಷಗಳಿಂದ ಹೋರಾಟ ಮಾಡ್ತಿದ್ದಾರೆ.

ಬೆಂಗಳೂರು ಮತ್ತು ಕಲಬುರಗಿಯಲ್ಲಿರುವ ಹೈನು ವಿಜ್ಞಾನ ಕಾಲೇಜಿನಲ್ಲಿ 250 ಮಂದಿ ವಿದ್ಯಾರ್ಥಿಗಳು ಹೈನು ವಿಜ್ಞಾನ (Dairy Technology B.Tech) ಶಿಕ್ಷಣ ಪಡೆಯುತ್ತಿದ್ದಾರೆ.

4 ವರ್ಷಗಳ ಈ ಶಿಕ್ಷಣ ಬಯಸುವ ವಿದ್ಯಾರ್ಥಿಗಳು ಇಂಜಿನಿಯರಿಂಗ್​ ಮತ್ತು ವೈದ್ಯಕೀಯ ಪದವಿ ಶಿಕ್ಷಣದ ಪ್ರವೇಶಕ್ಕೆ ನಡೆಸಲಾಗುವ ಸಿಇಟಿ ಪರೀಕ್ಷೆಯ ಮೂಲಕವೇ ಆಯ್ಕೆ ಆಗಬೇಕಾಗುತ್ತದೆ.

4 ವರ್ಷಗಳ ಶಿಕ್ಷಣ ಮುಗಿಸಿದ ಬಳಿಕ ತಮ್ಮ ಶಿಕ್ಷಣಕ್ಕೆ ಸೂಕ್ತವಾದ ಹುದ್ದೆ ಸದ್ಯ ಪಶುಸಂಗೋಪನಾ ಇಲಾಖೆಯಲ್ಲಿ ಇಲ್ಲ.

ಈ ಹಿನ್ನೆಲೆಯಲ್ಲಿ ತಾಲೂಕು ಅಥವಾ ಜಿಲ್ಲೆಗೆ ಅನುಗುಣವಾಗಿ Dairy Technology ಶಿಕ್ಷಣ ಪಡೆದಿರುವವರಿಗೆ ಹುದ್ದೆಯನ್ನು ಸೃಷ್ಟಿಸಬೇಕು ಎನ್ನುವುದು ವಿದ್ಯಾರ್ಥಿಗಳ ಆಗ್ರಹ.

ಪ್ರಸ್ತಾಪ ತಿರಸ್ಕರಿಸಿದ ಹಣಕಾಸು ಇಲಾಖೆ:

ಈ ಹಿಂದೆಯೂ ವಿದ್ಯಾರ್ಥಿಗಳು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್​ ಅವರ ಮೂಲಕ ಒತ್ತಡವನ್ನು ಹೇರಿದ್ದರು. ಆ ಬಳಿಕ ಪಶುಸಂಗೋಪನಾ ಇಲಾಖೆಯ DEO ಹುದ್ದೆ ಸೃಷ್ಟಿಸಬಹುದು ಎಂದು ಹಣಕಾಸು ಇಲಾಖೆಗೆ ಪ್ರಸ್ತಾಪ ಸಲ್ಲಿಸಿತ್ತು. ಆದ್ರೆ DEO ಹುದ್ದೆ ಸೃಷ್ಟಿಸಬೇಕೆಂಬ ಪ್ರಸ್ತಾಪವನ್ನು ಹಣಕಾಸು ಇಲಾಖೆ ತಿರಸ್ಕರಿಸಿದೆ.

ಈ ಹಿನ್ನೆಲೆಯಲ್ಲಿ ಈಗ ಮತ್ತೆ ಡೈರಿ ತಂತ್ರಜ್ಞಾನ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹೋರಾಟಕ್ಕಿಳಿದ್ದಾರೆ.

LEAVE A REPLY

Please enter your comment!
Please enter your name here