ಬೆಂಗಳೂರು: ಗ್ರಾಮಾಂತರ ಜಿಲ್ಲಾ ಪಂಚಾಯಿತಿಯಲ್ಲಿ ಉದ್ಯೋಗಾವಕಾಶ

ಬೆಂಗಳೂರು: ಗ್ರಾಮಾಂತರ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ 65 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಈ ನೇಮಕಾತಿಯ ಮೂಲಕ ಕರ ವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್‌, ಅಟೆಂಡೆಂಟ್‌ ಹಾಗೂ ಕ್ಲೀನರ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಇದರ ಅಧಿಕೃತ ವೆಬ್‌ಸೈಟ್‌ ಆದ sevasindhuservices.karnataka.gov.in ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಸಂಬಂಧಪಟ್ಟಂತೆ ನೇಮಕಾತಿಯ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

ಡಾಟಾ ಎಂಟ್ರಿ ಆಪರೇಟರ್‌ – 3 ಹುದ್ದೆಗಳು
ಕರ ವಸೂಲಿಗಾರರು – 3 ಹುದ್ದೆಗಳು
ಅಟೆಂಡೆಂಟ್‌ – 10ಹುದ್ದೆಗಳು
ಕ್ಲೀನರ್‌ – 49 ಹುದ್ದೆಗಳು

ವಿದ್ಯಾರ್ಹತೆ ಏನು..?
ಡಾಟಾ ಎಂಟ್ರಿ ಆಪರೇಟರ್‌ ಹುದ್ದೆ: ಮಾನ್ಯತೆ ಪಡೆದ ವಿದ್ಯಾಲಯದಿಂದ ಪದವಿ ಹೊಂದಿದ್ದ ಹಾಗೂ ಕಂಪ್ಯೂಟರ್‌ ಜ್ಞಾನವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕರ ವಸೂಲಿಗಾರರು ಹುದ್ದೆ : ಮಾನ್ಯತೆ ಪಡೆದ ವಿದ್ಯಾಲಯದಿಂದ ಪದವಿ ಹಾಗೂ 12ನೇ ತರಗತಿ ಶಿಕ್ಷಣವನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅಟೆಂಡೆಂಟ್‌ ಹುದ್ದೆಗೆ : ಮಾನ್ಯತೆ ಪಡೆದ ವಿದ್ಯಾಲಯದಿಂದ 12ನೇ ತರಗತಿ ಅಥವಾ ಹತ್ತನೇ ತರಗತಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕ್ಲೀನರ್‌ ಹುದ್ದೆ : ಮಾನ್ಯತೆ ಪಡೆದ ವಿದ್ಯಾಲಯದಿಂದ ಹತ್ತನೇ ತರಗತಿ ಶಿಕ್ಷಣವನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ :

ಈ ಹುದ್ದೆಗೆ 18 ರಿಂದ 35 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅದರಲ್ಲಿ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ, SC/ST ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ ಎಷ್ಟು..?

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ರೂ. 300
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ -ರೂ. 200
SC/ST ಅಭ್ಯರ್ಥಿಗಳಿಗೆ – ರೂ. 100
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : ಅಕ್ಟೋಬರ್‌ 20, 2022

ಆಯ್ಕೆ ವಿಧಾನ ಹೇಗೆ..?
ಕರವಸೂಲಿಗಾರರು, ಅಟೆಂಡೆಂಟ್‌, ಕ್ಲೀನರ್‌ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಪಡೆದ ಗರಿಷ್ಠ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇನ್ನುಳಿದಂತೆ ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಪಡೆದ ಗರಿಷ್ಠ ಅಂಕ ಹಾಗೂ ಕಂಪ್ಯೂಟರ್‌ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.