ವಿದ್ಯಾಸಿರಿ ಯೋಜನೆ : ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕರ್ನಾಟಕ ಸರ್ಕಾರ ಇತ್ತಿಚಿನ ವರ್ಷಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಸರ್ಕಾರ ಬಡ ಮಕ್ಕಳು, ಹಿಂದುಳಿದ ವರ್ಗದ ಮಕ್ಕಳು, ಮತ್ತು ಅಲ್ಪ ಸಂಖ್ಯಾತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಮತ್ತು ಅವರು ಕೂಡಾ ಶಿಕ್ಷಣವನ್ನು ಪಡೆಯಬೇಕು ಎನ್ನುವ ದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.

ಅದರಲ್ಲೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಮುಸ್ಲಿಂ, ಕ್ರಿಶ್ಚಿಯನ್‌, ಜೈನ್‌, ಸಿಖ್‌, ಬೌದ್ಧ, ಪಾರ್ಸಿ ಸಮುದಾಯದವರನ್ನ ಅಲ್ಪ ಸಂಖ್ಯಾತರು ಎಂದು ಗುರಿತಿಸಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಸಹಾಯ ಮಾಡಲಾಗುತ್ತದೆ.

ಹಾಗೇಯೆ ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗಾಗಿ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದಿದ್ದು, ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ಅಲ್ಪಸಂಖ್ಯಾತ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಈ ಯೋಜನೆ ಬಗ್ಗೆ ತಿಳಿಯದೆ, ಹಾಗೂ ಈ ಯೋಜನೆಯನ್ನು ಹೇಗೆ ಪಡಿಯಬೇಕು ಎಂಬ ಅರಿವಿಲ್ಲದೆ ಎಷ್ಟೋ ವಿದ್ಯಾರ್ಥಿಗಳು ಇದರಿಂದ ವಂಚಿತರಾಗುತ್ತಾರೆ. ಹೀಗಾಗಿ ನಾವು ಈ ಲೇಖನದಲ್ಲಿ ವಿದ್ಯಾಸಿರಿ ಯೋಜನೆಯನ್ನು ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಬಹುದು. ಈ ವಿದ್ಯಾಸಿರಿ ಯೋಜನೆಯನ್ನು ಪಡೆಯಲು ವಿದ್ಯಾರ್ಥಿಗಳು ಮೊದಲು ಮುಸ್ಲಿಂ, ಕ್ರಿಶ್ಚಿಯನ್‌, ಜೈನ್‌, ಸಿಖ್‌, ಬೌದ್ಧ, ಪಾರ್ಸಿ ಸಮುದಾಯಕ್ಕೆ ಸೇರಿರಬೇಕು.

ಅರ್ಹತೆಗಳೇನು?                                                                                                        ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನೆಲೆಯಾಗಿರಬೇಕು.
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
ಪ್ರವರ್ಗ-1 ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಕುಟುಂಬದ ಆದಾಯ 2.50 ಲಕ್ಷಕ್ಕಿಂತ ಕಡಿಮೆ ಇರಬೇಕು.
ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದಿರಬೇಕು.
ಮನೆಯಿಂದ ಕಾಲೇಜಿಗೆ ಕನಿಷ್ಠ ಐದರಿಂದ ಅಥವಾ ಅದಕ್ಕಿಂತ ಹೆಚ್ಚು ಕಿ.ಮೀ. ದೂರ ಇರಬೇಕು.
ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಉತ್ತಿರ್ಣರಾಗಿರಬೇಕು.
ಬಿಬಿಎಂಪಿ, ಟೌನ್‌ ಮುನ್ಸಿಪಲ್‌ ಮತ್ತು ಕಾರ್ಪೊರೇಶನ್‌ ಮಿತಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿರುವಿದಿಲ್ಲ.
ಖಾಸಗಿ ವಸತಿಗಳಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನೆ ಪಡೆಯಲು ಅರ್ಹರಾಗಿರುವುದಿಲ್ಲ.
ಆಯ್ಕೆ ಆದ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಅವಧಿಯಲ್ಲಿ ತಿಂಗಳಿಗೆ 1,500 ರೂ. ಮೊತ್ತವನ್ನು 10 ತಿಂಗಳ ಅವಧಿಗೆ 15,000 ರೂ. ಪಡೆಯುತ್ತಾರೆ.
ವಿದ್ಯಾರ್ಥಿಗಳು ಬೇಕಾಗಿರುವ ಸೂಕ್ತವಾದ ದಾಖಲೆಗಳನ್ನು ಹೊಂದಿರಬೇಕು.
ಈ ಎಲ್ಲಾ ದಾಖಲೆಗಳಿಗೆ ಕಾಲೇಜಿನ ಪ್ರಾಂಶುಪಾಲರ ಮೂಲಕ ಅಟೆಸ್ಟೆಡ್‌ ಮಾಡಿಸಬೇಕು.

ಬೇಕಾದ ದಾಖಲೆಗಳು
ಸ್ಟಾಂಪ್‌ ಸೈಝ್‌ ಫೋಟೋ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಆದಾಯ ಮಿತಿ ಪ್ರವರ್ಗ-1 ಇದ್ದವರಿಗೆ 2,50 ಲಕ್ಷ ರೂ., ಉಳಿದವರು 2 ಲಕ್ಷ ರೂ.)
ವಿದ್ಯಾರ್ಥಿ ಹೆಸರಿನಲ್ಲಿರುವ ಬ್ಯಾಂಕ್‌ ಅಕೌಂಟ್‌ ಪ್ರತಿ
ಕಳೆದ ಸಾಲಿನ ವಾರ್ಷಿಕ ಪರೀಕ್ಷೆಯ ಅಂಕಪಟ್ಟಿ
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
ಮನೆಯಿಂದ ಕಾಲೇಜಿಗಿರುವ ದೂರದ ಪ್ರಮಾಣ ಪತ್ರ ( ವಾಸ ಸ್ಥಳ ದೃಢೀಕರಣ ಪತ್ರ )
ರೇಷನ್‌ ಕಾರ್ಡ್/ವೋಟರ್‌ ಐಡಿ/ ಆಧಾರ್‌ ಕಾರ್ಡ್‌ ( ಇವುಗಳಲ್ಲಿ ಯಾವುದಾದರೂ ಒಂದು ದಾಖಲೆ)