ಆಚಾರ್ಯ ಕಾಲೇಜು ಬಳಿ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ – ಸರಣಿ ಅನಾಹುತಗಳಿಗೆ ಯಾರು  ಹೊಣೆ?

ಬೆಂಗಳೂರಿನ ಚಿಕ್ಕಬಾಣವರ ಬಳಿಯ ಆಚಾರ್ಯ ಕಾಲೇಜು ರಸ್ತೆ ಸಂಪೂರ್ಣ ಗುಂಡಿಮಾಯವಾಗಿದೆ. ಆಚಾರ್ಯ ಕಾಲೇಜು ರಸ್ತೆಯಲ್ಲಿ ಬರುವ ಗಣಪತಿ  ನಗರದ ವ್ಯಾಪ್ತಿಯ ಮುಖ್ಯ ರಸ್ತೆ ತೀರಾ ಹದಗೆಟ್ಟಿದೆ. ರಸ್ತೆಯ ದೊಡ್ಡ ದೊಡ್ಡ ಗುಂಡಿಗಳು ಸರಣಿ ಅನಾಹುತಗಳಿಗೆ  ಕಾರಣವಾಗುತ್ತಿವೆ.

ಸೆಪ್ಟೆಂಬರ್ 05ರ ರಾತ್ರಿ 8:30ರ ಸುಮಾರಿಗೆ ಜಾಲವೃತವಾದ ಎಡಿಫಿ ಸ್ಕೂಲ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತಿದ್ದ ವ್ಯಕ್ತಿಯೊಬ್ಬರು ಗುಂಡಿಗೆ ಬಿದ್ದು ಗಾಯ ಗೊಂಡಿದ್ದಾರೆ.

ಗಣಪತಿ ನಗರದ  ಮಲ್ಲಿಕಾರ್ಜುನ ಎಂಬುವವರ ಕಾಲಿನ  ಮೂಳೆ ಮುರಿದುಹೋಗಿದೆ. ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಅನಾಹುತಗಳು ಇತೀಚಿಗೆ ಇಲ್ಲಿ ಸಾಮಾನ್ಯವಾಗಿವೆ.

ರಸ್ತೆ ಗುಂಡಿ ಮುಚ್ಚುವಂತೆ ಹಲವು  ಬಾರಿ  ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ  ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯ ಮುಖಂಡ ಅರುಣ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಇದೀಗ ಸ್ಥಳೀಯ ಶಾಸಕರಾದ ದಾಸರಹಳ್ಳಿ ಮಂಜುನಾಥ ಅವರಿಗೆ ಗಣಪತಿ  ನಗರ ಕ್ಷೇಮಭಿವೃದ್ಧಿ ಸಂಘದ ವತಿಯಿಂದ ಅಂತಿಮ  ಮನವಿ ಸಲ್ಲಿಸುತ್ತೇವೆ. ಇದಕ್ಕೂ ಸ್ಪಂದಿಸದೆ ಇದ್ದಲ್ಲಿ ರಸ್ತೆ ಬಂದ್ ಮಾಡ್ತೀವಿ. ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸ್ತೀವಿ  ಸ್ಥಳೀಯ ಮುಖಂಡ ಅರುಣ್ ಕುಮಾರ್ ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here