2023ರ ವಿಧಾನಸಭಾ ಚುನಾವಣೆಯಲ್ಲಿ (Assembly Election) ಹಾಸನ ನಗರ (Hassan) ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ನಿಂದ (JDS) ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದು ಈಗ ಪಕ್ಷದಲ್ಲೇ ಬಹಿರಂಗ ಸಂಘರ್ಷ, ಗಲಾಟೆಗೆ ವಸ್ತುವಾಗಿದೆ.
ಹಾಸನ ಕ್ಷೇತ್ರದಿಂದ ಮಾಜಿ ಜೆಡಿಎಸ್ ಶಾಸಕ ದಿವಂಗತ ಹೆಚ್ ಎಸ್ ಪ್ರಕಾಶ್ (Late H S Prakash) ಅವರ ಮಗ ಸ್ವರೂಪ್ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ( H D Revanna) ಎದುರೇ ಸ್ವರೂಪ್ ಅವರ ಬೆಂಬಲಿಗರು ಗಲಾಟೆ ಮಾಡಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸ್ವರೂಪ್ ಅವರ ಬೆಂಬಲಿಗರು ಗಲಾಟೆ ಮಾಡಿದ್ದಾರೆ. ರೇವಣ್ಣ ವಿರುದ್ಧವೇ ಕಿಡಿಕಾರಿದ್ದಾರೆ. ಸ್ವರೂಪ್ ಬೆಂಬಲಿಗರ ಗಲಾಟೆಯಿಂದ ತಾಳ್ಮೆ ಕಳೆದುಕೊಂಡ ಹೊರಹೋಗಿ ಎಂದು ಗದರಿದರು. ಜೊತೆಗೆ ರೇವಣ್ಣ ತಾವು ಹಿಡಿದಿದ್ದ ಮೈಕ್ ಎಸೆದ ಘಟನೆಯೂ ನಡೆಯಿತು.
ಸ್ವರೂಪ್ ಅವರು ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ ಆ ಪ್ರಯತ್ನ ಫಲಕೊಡಲಿಲ್ಲ. ಬಳಿಕ ಸ್ವರೂಪ್ ಬೆಂಬಲಿಗರು ಪಕ್ಷದ ಸಭೆ ಬಹಿಷ್ಕರಿಸಿ ಹೊರನಡೆದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (H D Devegowda), ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಮತ್ತು ಮತ್ತೋರ್ವ ಟಿಕೆಟ್ ಆಕಾಂಕ್ಷಿ ಪ್ರಸಾದ್ ಗೌಡ ಅವರ ಪೋಟೋಗಳಿದ್ದ ಫ್ಲೆಕ್ಸ್ಗಳನ್ನು ಸ್ವರೂಪ್ ಬೆಂಬಲಿಗರು ಹರಿದು ಹಾಕಿದರು.
ರೇವಣ್ಣ ಪತ್ನಿ ಭವಾನಿ ರೇವಣ್ಣ ಕೂಡಾ ಈ ಬಾರಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ADVERTISEMENT
ADVERTISEMENT