ನಿನ್ನೆ ಬಜರಂಗದಳದಿಂದ ದೂರು, ಇವತ್ತು ಬೆಂಗಳೂರು ಪೊಲೀಸರಿಂದ ನಟ ಚೇತನ್​ ಬಂಧನ

ಬಜರಂಗದಳವರು ಕೊಟ್ಟ ದೂರಿನ ಆಧಾರದಲ್ಲಿ ಬೆಂಗಳೂರಿನ ಪೊಲೀಸರು ನಟ ಚೇತನ್​ ಅವರನ್ನು ಬಂಧಿಸಿದ್ದಾರೆ.

ಬಜರಂಗದಳದ ಶಿವಕುಮಾರ್​ ಎಂಬ ಶೇಷಾದ್ರಿಪುರಂ ಪೊಲೀಸ್​ ಠಾಣೆಯಲ್ಲಿ ನಿನ್ನೆ ದೂರು ದಾಖಲಿಸಿದ್ದರು. ಆ ದೂರು ಆಧರಿಸಿ ಎಫ್​ಐಆರ್​ ದಾಖಲಿಸಿಕೊಂಡ ಪೊಲೀಸರು ನಟ ಚೇತನ್​ ಅವರನ್ನು ಬಂಧಿಸಿದ್ದಾರೆ.

ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದು ನಟ ಚೇತನ್​ ಟ್ವೀಟಿಸಿದ್ದರು.

ಈ ಹಿಂದೆಯೂ ಹೈಕೋರ್ಟ್​ ನ್ಯಾಯಮೂರ್ತಿಯೊಬ್ಬರ ತೀರ್ಪಿನ ವಿರುದ್ಧ ಟ್ವೀಟ್​ ಮಾಡಿದ್ದರ ಸಂಬಂಧ ನಟ ಚೇತನ್​ ಬಂಧನವಾಗಿತ್ತು.