RCB vs GT : ಬೆಂಗಳೂರಲ್ಲಿ ಭಾರಿ ಮಳೆ.. ಆರ್​ಸಿಬಿಗೆ ಪ್ಲೇ ಆಫ್ ಟೆನ್ಶನ್

ಐಪಿಎಲ್-2023ರ ಸೀಜನ್​ನ ಕೊನೆಯ ಲೀಗ್ ಪಂದ್ಯದಲ್ಲಿ ಸೆಣೆಸಲು ಆರ್​ಸಿಬಿ ಮತ್ತು ಗುಜರಾತ್ ಟೈಟಾನ್ಸ್ ರೆಡಿ ಆಗಿವೆ. ಈಗಾಗಲೇ ಗುಜರಾತ್ ಪ್ಲೇಆಫ್​ ತಲುಪಿದೆ. ಹೀಗಾಗಿ ಬೆಂಗಳೂರು ರಾಯಲ್ ಚಾಲೆಂಜರ್ಸ್​ಗೆ ಈ ಮ್ಯಾಚ್ ತುಂಬಾನೆ ಇಂಪಾರ್ಟೆಂಟ್. ಈ ಪಂದ್ಯ ಗೆದ್ದಲ್ಲಿ ಮಾತ್ರ ಆರ್​ಸಿಬಿ ಪ್ಲೇಆಫ್​ ತಲುಪುವ ಅವಕಾಶಗಳಿವೆ. ಆದರೆ, ಈ ಅವಕಾಶಗಳಿಗೆ ಮಳೆರಾಯ ನೀರು ಚೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ.

ಬೆಂಗಳೂರಿನಲ್ಲಿ ರಣ ಮಳೆ ಆಗುತ್ತಿದ್ದು, ಬೆಂಗಳೂರಿನಲ್ಲಿ ನಿಗದಿಯಾದ ಕೊನೆಯ ಲೀಗ್ ಪಂದ್ಯ ನಡೆಯುವುದೇ ಅನುಮಾನವಾಗಿದೆ.

ಬೆಂಗಳೂರು ಪ್ಲೇ ಆಫ್ ಲೆಕ್ಕಾಚಾರ

– ಪಂದ್ಯ ನಡೆದಲ್ಲಿ ಗುಜರಾತ್ ವಿರುದ್ಧ ಗೆಲುವು ಸಾಧಿಸಬೇಕು. ಆಗ 16 ಪಾಯಿಂಟ್​ ಮೂಲಕ, ಉನ್ನತ ರನ್​ರೇಟ್​ ಕಾರಣ ಆರ್​ಸಿಬಿ ಪ್ಲೇ ಆಫ್​ ತಲುಪುತ್ತದೆ.

– ಮಳೆ ಬಂದು ಪಂದ್ಯ ನಿಂತರೇ, ಗುಜರಾತ್​-ಆರ್​ಸಿಬಿಗೆ ತಲಾ ಒಂದು ಪಾಯಿಂಟ್​ ಲಭಿಸುತ್ತದೆ. ಬೆಂಗಳೂರು ಖಾತೆಯಲ್ಲಿ ಒಂದು ಪಾಯಿಂಟ್ ಸೇರಲಿದ್ದು, 15 ಪಾಯಿಂಟ್ಸ್​ಗೆ ತಲುಪುತ್ತದೆ.

– ಸದ್ಯ ಹೈದೆರಾಬಾದ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ(14 ಪಾಯಿಂಟ್​) ಸೋತಲ್ಲಿ ,ಮಾತ್ರ ಆರ್​ಸಿಬಿಗೆ ಪ್ಲೇ ಆಫ್​ ತಲುಪುತ್ತದೆ.. ಮುಂಬೈ ಗೆದ್ದಲ್ಲಿ ಆರ್​ಸಿಬಿ ಮನೆಗೆ ಹಿಂತಿರುಬೇಕಾಗುತ್ತದೆ.