ಬೆಂಗಳೂರು : ಮತ್ತೊಬ್ಬ ಶಂಕಿತ ಉಗ್ರನ ಬಂಧನ

Suspected Terrosist, Terrorist, Bengaluru

ಬೆಂಗಳೂರಿ(Bengaluru)ನಲ್ಲಿ ಇಂದು ಮತ್ತೊಬ್ಬ ಶಂಕಿತ ಉಗ್ರ (Suspected Terrorist) ನನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಈ ಶಂಕಿತ ಉಗ್ರನನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

ನಿನ್ನೆ ರಾತ್ರಿ ಬೆಂಗಳೂರಿ(Bengaluru)ನಲ್ಲಿ ಪುಡ್ ಡೆಲಿವರಿ ಬಾಯ್ಸ್ (Food Delivery Boys)​ಗಳೊಂದಿಗೆ ಉಳಿದುಕೊಂಡಿದ್ದ ಶಂಕಿತ ಉಗ್ರ ಅಕ್ತರ್ ಹುಸೇನ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆತನ ಹೇಳಿಕೆಯನ್ನಾಧರಿಸಿ ಮತ್ತೊಬ್ಬ ಶಂಕಿತ ಉಗ್ರನನ್ನು ಇಂದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

2 ದಿನದಲ್ಲಿಯೇ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆ ಮೂಲಕ ಬೆಂಗಳೂರು ಉಗ್ರರ ಹಡಗು ತಾಣವಾಗಿದೆಯಾ ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತಿವೆ. ಕೆಲ ತಿಂಗಳ ಹಿಂದೆಯಷ್ಟೇ ಒಬ್ಬ ಶಂಕಿತ ಉಗ್ರ( Bengaluru Suspected Terrorist)ನನ್ನು ಸಿಸಿಬಿ ಪೊಲೀಸರು(CCB Police) ವಶಕ್ಕೆ ಪಡೆದುಕೊಂಡಿದ್ದರು.

ಬೆಂಗಳೂರು : ಡೆಲಿವರಿ ಬಾಯ್ಸ್​ ಜೊತೆಗಿದ್ದ ಶಂಕಿತ ಉಗ್ರನ ಬಂಧನ

ಶಂಕಿತ ಉಗ್ರ ಅಖ್ತರ್ ಹುಸೇನ್​ನನ್ನ ಬಂಧಿಸಿದ್ದು ಹೇಗೆ?

ಅಖ್ತರ್ ಹುಸೇನ್ ಫುಡ್ ಡೆಲಿವರಿ ಹುಡುಗರೊಂದಿಗೆ ರೂಮ್​ ಹಂಚಿಕೊಂಡಿದ್ದ ಎನ್ನಲಾಗಿದೆ. ಕೇವಲ ರಾತ್ರಿ ಮಾತ್ರ ಈತ ಫುಡ್ ಡೆಲಿವರಿ ಮಾಡುತ್ತಿದ್ದ. ಹಗಲಲ್ಲಿ ರೂಮಿನಿಂದ ಹೊರಗಡೆಯೇ ಬರುತ್ತಿರಲಿಲ್ಲ.

ತಿಲಕ್​ನಗರದಲ್ಲಿನ ಈ ರೂಮ್​ ನ ಬಗ್ಗೆ ಸಿಸಿಬಿ ಪೊಲೀಸರು (CCB Police) ತಿಳಿಸುಕೊಂಡಿದ್ದರು. ಆರೋಪಿ(Suspected Terrorist)ಯ ಮೊಬೈಲ್ ಟವರ್ ಆಧರಿಸಿ ಆತ ರೂಮ್​ನಿಂದ ಹೊರಗಡೆ ಬರುವಾಗ ಸಿಸಿಬಿ ಪೊಲೀಸರು ಬಂಧಿಸಿದ್ದರು.

LEAVE A REPLY

Please enter your comment!
Please enter your name here