BBK9- ಮೊದಲ  ದಿನವೇ ಬಿಗ್ ಬಾಸ್ ಮನೆ ರಣ ರಣ

ನಿರೀಕ್ಷೆಯಂತೆ  ಮೊದಲ  ದಿನವೇ  ಬಿಗ್ ಬಾಸ್ (BigBoss Kannada)ಮನೆಯಲ್ಲಿ  ಮಹಾ ಕದನ  ನಡೆದಿದೆ. ಹೊಸಬರು  ವರ್ಸಸ್ ಹಳಬರು ಎನ್ನುವ ರೀತಿಯಲ್ಲಿ ಜೋರು ವಾಕ್ಸಮರ ನಡೆದಿದೆ. ವಿಶೇಷ ಅಂದ್ರೆ ಹೊಸಬರ ಗುಂಪಿನ ವಾದಕ್ಕೆ ಹಳಬರು ಕೂಡ ಬಲ ತುಂಬಿದ್ದಾರೆ.

ಊಟ ಮಾಡುವಾಗ ನಂಬರ್  ಜ್ಯೋತಿಷಿ ಆರ್ಯವರ್ಧನ್ (Aryavardhan) ತಾನು 10ಲಕ್ಷ ಮಂದಿಗೆ ಜ್ಯೋತಿಷ್ಯ ಹೇಳಿದ್ದೇನೆ ಎಂದಾಗ, ಸುಮ್ನಿರಿ ಭಟ್ರೇ ಇಲ್ಲೂ ಬಂಡಲ್ ಬಿಡ್ಬೇಡಿ ಎಂದು ಪ್ರಶಾಂತ್ ಸಂಬರಗಿ (Prashant Sambaragi)ಕೆಣಕುತ್ತಾರೆ. ಮಾತಿಗೆ ಮಾತು ಬೆಳೆದು, ಒಂದು ಹಂತದಲ್ಲಿ ನಾನಾ ನೀನಾ ಎನ್ನುವ ಮಟ್ಟಕ್ಕೆ ಹೋಗುತ್ತದೆ. ನಿನ್ ಹೆಸರು ಆರ್ಯವರ್ಧನ್ ಅಲ್ಲ ಅಂತಾ ಸಂಬರಗಿ ಜೋರಾಗಿ ಅರಚುತ್ತಾರೆ.

ಮತ್ತೊಂದು ಸನ್ನಿವೇಶದಲ್ಲಿ ಹೊಸ  ಕಂಟೆಸ್ಟೆಂಟ್ ದರ್ಶ್ ಚಂದ್ರಪ್ಪ(Darsh Chandrappa), ಸಂಬರಗಿಯನ್ನು ಕೆಣಕುತ್ತಾರೆ. ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದ ಮಹಿಳಾ ಕಂಟೆಸ್ಟೆಂಟ್ (Lady Cintestent)ಕುರಿತಾಗಿ ಸಂಬರಗಿ ಹೊರಗೆ ಕೆಟ್ಟದಾಗಿ ಮಾತಾಡಿದ್ದಾರೆ. ಇದು ಸರಿಯಲ್ಲ. ಉಂಡ ಮನೆಗೆ ದ್ರೋಹ ಬಗೆದಂತೆ ಎಂದು ದರ್ಶ್ ಚಂದ್ರಪ್ಪ ಹೇಳುತ್ತಾರೆ. ಇದಕ್ಕೆ ದಿವ್ಯ ಉರುಡಗ (Divya Urudaga)ಹೌದು  ಹೌದು ಎನ್ನುತ್ತಾರೆ. ಇದಕ್ಕೆ ಪ್ರಶಾಂತ್ ಸಂಬರಗಿ ಗರಂ ಆಗಿ ಹೌದು ಏನೀಗ, ನನ್ನಿಷ್ಟ ಮಾತಾಡ್ತೀನಿ ಎನ್ನುತ್ತಾ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಸಂಬರಗಿ ಲೆಕ್ಚರ್ ಕೊಡ್ತಾರೆ.

ಇದೆಲ್ಲ ಬಿಗ್ ಬಾಸ್ ಡೇ ಪ್ರೊಮೊದಲ್ಲಿ ಕಂಡು ಬಂದ ದಿನದ ಹೂರಣ. 9 ಹೊಸಬರ ಜೊತೆಗೆ 9 ಮಂದಿ ಹಳಬರು ಇದ್ದಾರೆ. ಸ್ಪರ್ಧೆ ವಿಚಾರಕ್ಕೆ, ಜಗಳದ ವಿಚಾರಕ್ಕೆ ಬಂದರೆ ಯಾರಿಗೇನು ಕಮ್ಮಿ ಇಲ್ಲ ಎನ್ನುವುದು ಕಂಟೆಸ್ಟೆಂಟ್ ಗಳನ್ನು ನೋಡಿದರೇ ಗೊತ್ತಾಗುತ್ತದೆ. ಮೊದಲ  ದಿನವೇ ಹೀಗೆ… ಹೋಗ್ತಾ ಹೋಗ್ತಾ ಹೌಸ್ ನಲ್ಲಿ ಇನ್ನೇನು ನೋಡ್ಬೇಕೋ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here