ರೈತರಿಂದ ಪೇಫಾರ್ಮರ್​ ಅಭಿಯಾನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್​​ ಕೈಗೊಂಡಿರುವ ಪೇಸಿಎಂ ಅಭಿಯಾನದಿಂದ ಪ್ರೇರಿತರಾಗಿರುವ ಮಂಡ್ಯ ಜಿಲ್ಲೆಯ ಪೇಫಾರ್ಮರ್ಸ್​​ (ರೈತರಿಗೆ ಪಾವತಿಸಿ) ಎಂದು ಅಭಿಯಾನ ಕೈಗೊಂಡಿದ್ದಾರೆ.
ರೈತರಿಗೆ ಕಬ್ಬಿಗೆ ಟನ್​ಗೆ 4,500 ರೂಪಾಯಿ ಪಾವತಿಸಿ ಎನ್ನುವ ಪೋಸ್ಟರ್​ನ್ನು ರೈತರು ವಾಟ್ಸಾಪ್​ ಮತ್ತು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
PayFarmer
PayFarmer
ರಾಜಕೀಯ ನಾಯಕರೇ ನೀವೆಲ್ಲ ಒಂದೇ ನಾಣ್ಯದ ಎರಡು ಮುಖಗಳೇ. ನೀವು ಯಾರೇ ಅಧಿಕಾರಕ್ಕೆ ಬಂದರೂ ರೈತರು ಕಷ್ಟಕಾರ್ಪಣ್ಯ ಬಗೆಹರಿಸುವ ಮನಸ್ಸಿಲ್ಲ. ಕೆಲವರು ಅಧಿಕಾರಕ್ಕೇರಲು ಸರ್ಕಸ್​ ಮಾಡುತ್ತಿದ್ದೀರಿ. ಇವರಿಗೆ ಮತ ಹಾಕಿದ ರೈತರು ಮಾತ್ರ ಸಂಕಷ್ಟ ಜೀವನ ನಡೆಸ್ತಿದ್ದಾರೆ. ಮೊದಲು ರೈತರು ಬೆಳೆದ ಬೆಳೆಗೆ ನ್ಯಾಯುತ ಬೆಲೆ ಕೊಡಿ. ಪ್ರತಿ ಟನ್​ ಖರೀದಿಗೆ 4,500 ರೂಪಾಯಿ ನಿಗದಿ ಮಾಡಿ
ಎಂದು ರೈತರು ಪೇಫಾರ್ಮರ್​​ ಪೋಸ್ಟರ್​ಗಳನ್ನು ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here