ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಮಣಿ ಗ್ರಾಮದ ನಿವಾಸಿ ಡಾ.ಅನುಶ್ ನಾಯ್ಕ್ ಬಂಧಿತ ವೈದ್ಯ. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ವೈದ್ಯನನ್ನು ಜುಲೈ 11 ರಂದು ಪೊಲೀಸರು ಬಂಧಿಸಿದ್ದಾರೆ.
ಡಾ.ಅನುಷ್ ಅವರು ಬಂಟ್ವಾಳದ ವೆನ್ಲಾಕ್ ಆಸ್ಪತ್ರೆಯ ವೈದ್ಯ. ಇವರು ಹತ್ತಿರದಲ್ಲೇ ಇದ್ದ ಮಣಿ ಸರ್ಕಾರಿ ಶಾಲೆಯ ಅಪ್ರಾಪ್ತ ಬಾಲಕಿಯನ್ನು ಮಾರ್ಚ್ 6, 2021 ಪರಿಚಯಿಸಿಕೊಂಡಿದ್ದ. ಬಾಲಕಿಯನ್ನು ಪ್ರೀತಿಸುವುದಾಗಿ ನಟಸಿದ್ದ. ಕೆಲವು ದಿನಗಳ ನಂತರ ಮೇ 2021 ರಲ್ಲಿ ಈ ವೈದ್ಯನ ಮದುವೆಯಾಗಿತ್ತು. ಇದು ತಿಳಿದ ನಂತರ ಬಾಲಕಿ ವೈದ್ಯನ ಪೋನ್ ಕಾಲ್ ತಿರಸ್ಕರಿಸಿದ್ದಳು.
ಬಾಲಕಿಯ ಈ ವರ್ತನೆಗೆ ಕೋಪಗೊಂಡಿದ್ದ ವೈದ್ಯ, ಬಾಲಕಿ ತನ್ನೊಂದಿಗೆ ಮಾತನಾಡದಿದ್ದರೆ ಅವಳನ್ನು ಹಾಗೂ ಅವಳ ಪೋಷಕರನ್ನು ಕೊಲ್ಲುವುದಾಗಿ ತಾಯಿಗೆ ಬೆದರಿಕೆ ಹಾಕಿದ್ದನು.
ಈ ಪ್ರಕರಣ ವಿಟ್ಟಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.